ಮಲಪ್ಪುರಂ: ಪಯ್ಯನಾಡಿನಲ್ಲಿ ನಿನ್ನೆ ರಾತ್ರಿ ಬೈಕ್‌ನಲ್ಲಿ ಬಂದ ಗ್ಯಾಂಗ್‌ನಿಂದ ಹಲ್ಲೆಗೊಳಗಾಗಿದ್ದ ಮಂಜೇರಿ ಪುರಸಭೆಯ ಕೌನ್ಸಿಲರ್ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಮೃತರು ಇಲ್ಲಿನ 16ನೇ ವಾರ್ಡ್‌ನ ಯುಡಿಎಫ್ ಕೌನ್ಸಿಲರ್ ಅಬ್ದುಲ್ ಜಲೀಲ್ (52) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 6 ಗಂಟೆಗೆ ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಏನಿದು ಘಟನೆ: ಮಾರ್ಚ್ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಜಲೀಲ್ ಮೂವರು ಸ್ನೇಹಿತರೊಂದಿಗೆ ಇನೋವಾ ಕಾರಿನಲ್ಲಿ ಹೋಗಿದ್ದಾರೆ. ಈ ವೇಳೆ ಶಾಪ್ವೊಂದರ ಮುಂಭಾಗ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬಂದ ಗ್ಯಾಂಗ್ ಕಾರಿನ ಲೈಟ್ ಆಫ್ ಮಾಡುವಂತೆ ಹೇಳಿದ್ದಾರೆ. ಇಲ್ಲದಿದ್ರೆ ಕಾರ್ನ್ನು ಬೇರೆ ಸ್ಥಳದಲ್ಲಿ ಪಾರ್ಕ್ ಮಾಡಿ ಎಂದಿದ್ದಾರೆ. ಈ ಸಂಬಂಧ ಎರಡು ಗುಂಪುಗಳ ಮಧ್ಯೆ ವಿವಾದ ಶುರುವಾಗಿದ್ದು, ಬೈಕ್‌ನಲ್ಲಿ ಬಂದಿದ್ದ ಗ್ಯಾಂಗ್ ಕೌನ್ಸಿಲರ್ ಗ್ಯಾಂಗ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು.
ಓದಿ: ಆತ್ಮ ನಿರ್ಭರ ಭಾರತ ಯೋಜನೆ ಹೊರತಾಗಿಯೂ ಚೀನಾದಿಂದ ಔಷಧೀಯ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳ: ಸರ್ಕಾರ
ತೀವ್ರವಾಗಿ ಗಾಯಗೊಂಡಿದ್ದ ಕೌನ್ಸಿಲರ್ ಜಲೀಲ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಜಲೀಸ್ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಜೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ದಾಳಿಕೋರರ ಪತ್ತೆಗೆ ಜಾಲ ಬೀಸಿದ್ದರು. ಬಳಿಕ ಅಬ್ದುಲ್ ಜಲೀಲ್‌ನನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ್ ಮಜೀದ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಶುಹೈಬ್ ಪತ್ತೆಗೆ ಮಂಜೇರಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೌನ್ಸಿಲರ್ ನಿಧನದ ಹಿನ್ನೆಲೆ ಮಂಜೇರಿ ನಗರಸಭೆ ವ್ಯಾಪ್ತಿಯಲ್ಲಿ ಇಂದು ಬಂದ್ಗೆ ಕರೆ ನೀಡಲಾಗಿದೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಂಬುದು ಕೇರಳ ರಾಜ್ಯದಲ್ಲಿ ಎಡ ಪಕ್ಷಗಳ ಮೈತ್ರಿಯಾಗಿದೆ. UDF ಪ್ರಸ್ತುತ ಕೇರಳದಲ್ಲಿ ಪ್ರತಿ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ.