ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದಲ್ಲಿ ಆಡಳಿತರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಎರಡನೇ ಸ್ಥಾನದಲ್ಲಿದ್ದರೇ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಸಿಪಿಎಂ ನೇತೃತ್ವದ ಎಲ್‌ಡಿಎಫ್ 941 ಗ್ರಾಮ ಪಂಚಾಯಿತಿಗಳಲ್ಲಿ 514, ಆರು ಕಾರ್ಪೊರೇಷನ್ ಪೈಕಿ ನಾಲ್ಕು, 14 ಜಿಲ್ಲಾ ಪಂಚಾಯಿತಿಗಳಲ್ಲಿ 10 ಮತ್ತು 152 ಬ್ಲಾಕ್ ಪಂಚಾಯತ್‌ಗಳಲ್ಲಿ 112ರಲ್ಲಿ ಗೆಲುವು ಸಾಧಿಸಿವೆ.
ಯುಡಿಎಫ್ 375 ಗ್ರಾ.ಪಂ., 44 ಬ್ಲಾಕ್ ಪಂ., 45 ಪುರಸಭೆ, 4 ಜಿಲ್ಲಾ ಪಂ., ಹಾಗೂ 3 ಕಾರ್ಪೊರೇಷನ್ಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 23 ಗ್ರಾಮ ಪಂಚಾಯಿತಿ ಹಾಗೂ 2 ಪುರಸಭೆಗಳಲ್ಲಿ ವಿಜಯ ಸಾಧಿಸಿದೆ.
ಬಿಗ್ ಬ್ರೇಕಿಂಗ್: ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆ ಪರಿಣಾಮಕಾರಿ ಫಲಿತಾಂಶ!
6 ಕಾರ್ಪೊರೇಷನ್, 941 ಗ್ರಾಮ ಪಂಚಾಯಿತಿ, 14 ಜಿಲ್ಲಾ ಪಂಚಾಯಿತಿ ಮತ್ತು 87 ಪುರಸಭೆ ಸೇರಿದಂತೆ 1,200 ಸ್ಥಳೀಯ ಸಂಸ್ಥೆಗಳ ಒಟ್ಟು 21,893 ವಾರ್ಡ್‌ಗಳಿಗೆ ಡಿಸೆಂಬರ್ 8, 10 ಮತ್ತು 14ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟಾರೆ ಮತದಾನ ಪ್ರಮಾಣ ಶೇ 76ರಷ್ಟು ಆಗಿದ್ದು, 2015ರಲ್ಲಿನ ಶೇ 77.76ಕಿಂತ ಕಡಿಮೆಯಾಗಿದೆ.
ವಿಜಯದ ಹಾದಿ ಹಿಡಿದ ಸಿಎಂ ಪಿಣರಾಯಿ ವಿಜಯನ್, ಇದು ಜನರ ಗೆಲುವು. ರಾಜ್ಯವನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೂಕ್ತವಾದ ಉತ್ತರ ನೀಡಿದಂತಿದೆ ಎಂದು ಹೇಳಿದರು.
ಬಿಜೆಪಿಗೆ ತ್ರಿಶೂರ್ ಮತ್ತು ತಿರುವನಂತಪುರಂನಲ್ಲಿ ಹಿನ್ನಡೆ ಕಂಡಿದೆ. ಆದರೆ, ಗ್ರಾಮ ಪಂಚಾಯಿತಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಪುರಸಭೆಯ ಸ್ಥಾನಗಳಲ್ಲಿ ಖಾತೆ ತೆರೆದಿದೆ.