ಕೊಚ್ಚಿ: ಸುಪ್ರೀಂಕೋರ್ಟ್‌ನ ಪೂರ್ವ ನಿದರ್ಶನಗಳಿಗೆ ಬದ್ಧವಾಗಿರುವ ಕಾರಣ ಮುಸ್ಲಿಂ ಮಹಿಳೆಯರು ತಮ್ಮ ಅಪ್ರಾಪ್ತ ಮಗುವಿನ ಆಸ್ತಿಯ ಪಾಲಕರಾಗಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಪಿ.ಬಿ. ಸುರೇಶ್ ಕುಮಾರ್ ಮತ್ತು ಸಿ.ಎಸ್.ಸುಧಾ ಅವರು ಈ ರೀತಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು 14 ಮತ್ತು 15 ನೇ ವಿಧಿಗಳ ಪ್ರಕಾರ ಪಾಲಕರಾಗಬಹುದು. ಹೀಗಾಗಿ ಈ ಆದೇಶ ಕಾನೂನು ಉಲ್ಲಂಘನೆ ಎಂದು ವಾದಿಸಿದ್ರೂ, ಸುಪ್ರೀಂಕೋರ್ಟ್‌ನ ಪೂರ್ವ ನಿದರ್ಶನಗಳಿಗೆ ಬದ್ಧವಾಗಿರುವುದರಿಂದ ಇದು ಸರಿಯಾಗಿದೆ ಎಂದಿದ್ದಾರೆ. ಕೋಯಿಕ್ಕೋಡ್‌ನ ಸಿ.ಅಬ್ದುಲ್ ಅಜೀಜ್ ಮತ್ತು ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಹೇಳಿದೆ.
ಇದನ್ನೂ ಓದಿ: ಪ್ರಾಣ ರಕ್ಷಕರಾದ ಪೊಲೀಸ್ ಸಿಬ್ಬಂದಿ .. ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ: VIDEO
ಶರೀಯತ್ ಕಾಯಿದೆಯು ರಾಜ್ಯ ಶಾಸನವಲ್ಲ ಎಂದು ಪರಿಗಣಿಸಲ್ಪಟ್ಟಿರುವುದರಿಂದ, ಮೇಲ್ಮನವಿದಾರರ ಪರವಾಗಿ ವಾದಿಸಿದಂತೆ ಸಂವಿಧಾನದ 14 ಅಥವಾ 15 ನೇ ವಿಧಿಯ ಅನ್ವಿಲ್ನಲ್ಲಿ ಅದನ್ನು ಪರೀಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯವು ತನ್ನ ಅಭಿಪ್ರಾಯದಲ್ಲಿ ಹೇಳಿದೆ. ಮುಸ್ಲಿಂ ತಾಯಿ ತನ್ನ ಅಪ್ರಾಪ್ತ ಮಕ್ಕಳ ಪೋಷಕರಾಗಬಾರದು ಎಂದು ಸುಪ್ರೀಂ ಕೋರ್ಟ್‌ನಿಂದ ಹಲವಾರು ತೀರ್ಪುಗಳು ಇರುವುದರಿಂದ, ಆರ್ಟಿಕಲ್ 141 ರ ಅಡಿ ಒದಗಿಸಲಾದ ಸುಪ್ರೀಂ ಕೋರ್ಟ್ ಘೋಷಿಸಿದ ಕಾನೂನನ್ನು ಅನುಸರಿಸಲು ಹೈಕೋರ್ಟ್ ಬದ್ಧವಾಗಿದೆ ಎಂದು ನ್ಯಾಯಾಲಯವು ಸೂಚಿಸಿದೆ.