ETV Bharat / bharat

ಪಿತೃತ್ವ ವಿವಾದದ ಪ್ರತಿ ಪ್ರಕರಣದಲ್ಲೂ ಡಿಎನ್​ಎ ಪರೀಕ್ಷೆ ಅಗತ್ಯವಿಲ್ಲ: ಕೇರಳ ಹೈಕೋರ್ಟ್​​ - ಡಿಎನ್​ಎ ಪರೀಕ್ಷೆ ನಡೆಸುವುದಕ್ಕೆ ನ್ಯಾಯಾಲಯ

ಪಿತೃತ್ವ ನಿರಾಕರಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ಈ ರೀತಿ ಅಭಿಪ್ರಾಯಪಟ್ಟಿತು.

Kerala High court says DNA testing is not required in every case of paternity dispute

author img

By ETV Bharat Karnataka Team

Published : Sep 21, 2023, 1:20 PM IST

ಕೊಚ್ಚಿ (ಕೇರಳ): ಮಗುವಿನ ಪಿತೃತ್ವ ವಿವಾದದ ಎಲ್ಲಾ ಪ್ರಕರಣಗಳಲ್ಲೂ ಅದನ್ನು ಸಾಬೀತು ಮಾಡಲು ಡಿಎನ್​ಎ ಪರೀಕ್ಷೆ ನಡೆಸುವುದಕ್ಕೆ ನ್ಯಾಯಾಲಯಗಳು ನಿರ್ದೇಶನ ನೀಡಬಾರದು ಎಂದು ಕೇರಳ ಹೈಕೋರ್ಟ್​ ತಿಳಿಸಿದೆ. ಮಗುವಿನ ಪಿತೃತ್ವ ವಿವಾದ ಕುರಿತ ಪ್ರಕರಣಗಳಲ್ಲಿ ಪಿತೃತ್ವ ನಿರಾಕರಣೆಯಲ್ಲಿ ನಿರ್ದಿಷ್ಟ ಕಾರಣಗಳು ಕಂಡುಬಂದು, ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬಂತಹ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಡಿಎನ್​ಎ ಪರೀಕ್ಷೆಗೆ ಅವಕಾಶ ನೀಡಬೇಕು ನಿರ್ದೇಶನ ನೀಡಿದೆ.

ನ್ಯಾ.ಎ.ಬದ್ರೀದ್ದೀನ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಪರೂಪ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮತ್ತು ಇಂಥ ಪರೀಕ್ಷೆಯಿಂದ ಮಾತ್ರ ವಿವಾದ ಬಗೆಹರಿಯಲು ಸಾಧ್ಯವಿದೆ ಎನ್ನುವಂತಹ ಪ್ರಕರಣದಲ್ಲಿ ಡಿಎನ್​ಎ ಪರೀಕ್ಷೆ ಅಥವಾ ಇತರೆ ವೈಜ್ಞಾನಿಕ ಪರೀಕ್ಷೆಗೆ ನಿರ್ದೇಶಿಸಬಹುದು ಎಂದರು.

ಕೆಲವು ಪ್ರಕರಣದಲ್ಲಿ ಒದಗಿಸಿದ ಸಾಕ್ಷ್ಯ, ಪುರಾವೆಗಳಿಂದ ಪಿತೃತ್ವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಹೋದರೆ, ಈ ವಿವಾದಗಳನ್ನು ಬಗೆಹರಿಸಲು ಡಿಎನ್​ಎ ಪರೀಕ್ಷೆ ಸೂಕ್ತ ಎಂದಾಗ ಮಾತ್ರ ಡಿಎನ್​ಎ ಅಥವಾ ಇತರೆ ವೈಜ್ಞಾನಿಕ ಪರೀಕ್ಷೆಗೆ ನ್ಯಾಯಾಲಯ ಸೂಚಿಸಬಹುದು. ಅಂತಹ ಅಗತ್ಯ ಕಂಡುಬಾರದೇ ಇರುವ ಪ್ರಕರಣದಲ್ಲಿ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣ ನಡೆಸಬಹುದು ಎಂದು ಸಲಹೆ ನೀಡಿತು.

ಪ್ರಕರಣವೇನು?: ಕೌಟುಂಬಿಕ ನ್ಯಾಯಾಲಯದ ಪ್ರಕರಣವೊಂದರಲ್ಲಿ ತನ್ನಿಂದ ದೂರಾದ ಹೆಂಡತಿ ಮತ್ತು ಮಗುವಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ. ಆ ಮಗು ತನ್ನದಲ್ಲ ಎಂದು ವಾದಿಸಿ ವ್ಯಕ್ತಿಯೊಬ್ಬರು ಪಿತೃತ್ವ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿ ಸಲ್ಲಿಸಿದ ಹೆಂಡತಿ, ಗಂಡ ಜೀವನಾಂಶ ನೀಡಲು ನಿರಾಕರಿಸಿ, ಮಗುವಿನ ಪಿತೃತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರತಿವಾದ ಮಾಡಿದ್ದರು. ಈ ಪ್ರಕರಣವನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ, ಹೆಂಡತಿ ಮತ್ತು ಮಗುವಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿತು. ಈ ಆದೇಶದ ವಿರುದ್ಧ ವ್ಯಕ್ತಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ಆಲಿಸಿದ ಕೇರಳ ಉಚ್ಛ ನ್ಯಾಯಾಲಯ ಅರ್ಜಿ ವಜಾಗೊಳಿಸಿ, ಕೌಟುಂಬಿಕ ನ್ಯಾಯಾಲಯ ನಿರ್ಧಾರವನ್ನು ಎತ್ತಿ ಹಿಡಿಯಿತು.

ಇದನ್ನೂ ಓದಿ: ಅಪರಾಧ ಮಾಡಿ, ಶಿಕ್ಷೆ ಪೂರೈಸದೇ ಬಿಡುಗಡೆಯಾಗೋದು ಮೂಲಭೂತ ಹಕ್ಕೇ.. ಬಿಲ್ಕಿಸ್​ ಬಾನು ಕೇಸಲ್ಲಿ ಸುಪ್ರೀಂಕೋರ್ಟ್​ ಖಡಕ್ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.