ಎರ್ನಾಕುಲಂ : ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ 13 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅನುಮತಿಸಿದೆ. 26 ವಾರಗಳ ಗರ್ಭಿಣಿಯಾಗಿದ್ದ ಬಾಲಕಿ ಗರ್ಭಪಾತವನ್ನು 24 ಗಂಟೆಗಳೊಳಗೆ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಸಂತ್ರಸ್ತೆ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ಈ ಹಿಂದಿನ ವಿಚಾರಣೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ವರದಿ ಸಲ್ಲಿಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ವೈದ್ಯಕೀಯ ಮಂಡಳಿ ನಿನ್ನೆ ವರದಿ ಸಲ್ಲಿಸಿತ್ತು.
ಸಂತ್ರಸ್ತೆಯು ಅಪ್ರಾಪ್ತ ವಯಸ್ಸಿನವಳು ಮತ್ತು ಅತ್ಯಾಚಾರಕ್ಕೊಳಗಾಗಿದ್ದಾಳೆ. ಗರ್ಭಧಾರಣೆಯನ್ನು ಅನುಮತಿಸುವುದು ಜೀವನದುದ್ದಕ್ಕೂ ಒಂದು ಗಾಯವಾಗಿ ಉಳಿಯುತ್ತದೆ.
ಇದು ಸಂತ್ರಸ್ತೆ ಮತ್ತು ಅವಳ ಪೋಷಕರಿಗೆ ಆಘಾತಕಾರಿಯಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಬಾಲಕಿಯು ತನ್ನ 14 ವರ್ಷದ ಸಹೋದರನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಗರ್ಭಧರಿಸಿದ್ದಳು.