ETV Bharat / bharat

ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ವಜಾಗೊಳಿಸಿದ ಕೇರಳ ಸರ್ಕಾರ - ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ

ಕೇರಳ ರಾಜ್ಯಪಾಲ ಹಾಗೂ ಎಲ್​ಡಿಎಫ್ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಹೆಚ್ಚುತ್ತಿದ್ದು, ಇದೀಗ ಕೇರಳ ಸರ್ಕಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ವಜಾಗೊಳಿಸಿದೆ.

kerala govt
ಕೇರಳ ಸರ್ಕಾರ
author img

By

Published : Nov 11, 2022, 9:29 AM IST

ತಿರುವನಂತಪುರಂ: ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಯ ನಡುವಿನ ಗುದ್ದಾಟ ಉಲ್ಬಣಗೊಂಡ ಒಂದು ದಿನದ ಬಳಿಕ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ತೆಗೆದುಹಾಕಿ ಪಿಣರಾಯಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ರಾಜ್ಯಪಾಲರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿದ್ದಾರೆ ಮತ್ತು ರಾಜ್ಯದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಆಡಳಿತದೊಂದಿಗೆ ದಿನನಿತ್ಯ ಸಂಘರ್ಷಕ್ಕೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ, ರಾಜ್ಯಪಾಲರ ಬದಲಿಗೆ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯ ವ್ಯಕ್ತಿಯನ್ನು ನೇಮಿಸಲು ವಿಶ್ವವಿದ್ಯಾಲಯದ ನಿಯಮಗಳನ್ನು ಬದಲಾಯಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಕೇರಳ ರಾಜ್ಯಪಾಲರ ಇಬ್ಬರು ಕಾನೂನು ಸಲಹೆಗಾರರ ರಾಜೀನಾಮೆ

ಇನ್ನು ಮುಂದೆ ಡೀಮ್ಡ್ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣೆ ಕುರಿತು ರಾಜ್ಯ ಸರ್ಕಾರದ ನಿರ್ಧಾರಗಳನ್ನು ಕೇರಳ ಕಲಾಮಂಡಲಂ ಅನುಸರಿಸುತ್ತದೆ. ಕಳೆದ ಹಲವು ದಿನಗಳಿಂದ ಉಪಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆ ಕುರಿತು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದ್ದು, ಆರೋಪ - ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಗವರ್ನರ್‌-ಸರ್ಕಾರ ಗುದ್ದಾಟ ತೀವ್ರ; ಹಣಕಾಸು ಸಚಿವರ ವಿರುದ್ಧ ಕ್ರಮ ತಿರಸ್ಕರಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.