ಕಾಂಞಂಗಾಡ್(ಕೇರಳ): ಸ್ಥಳೀಯ ಅಂಗಡಿಯೊಂದರಲ್ಲಿ ಶವರ್ಮಾ, ಜ್ಯೂಸ್ ಮತ್ತಿತರ ಆಹಾರ ಸೇವಿಸಿ ವಿಷಾಹಾರವಾಗಿ ಪರಿವರ್ತನೆಯಾದ ಪರಿಣಾಮ 16 ರ ಹರೆಯದ ಬಾಲಕಿ ಸಾವನ್ನಪ್ಪಿದ್ದಾಳೆ. ಇದೇ ವೇಳೆ 18 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ವಿಷಾಹಾರ ಸೇವನೆಯೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಕಾಂಞಂಗಾಡ್ ಜಿಲ್ಲೆಯ ಕರಿವಲ್ಲೂರಿನ ನಿವಾಸಿಯಾದ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಂಗಡಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಸದ್ಯ ಬಂದ್ ಮಾಡಿದ್ದಾರೆ. ಜೊತೆಗೆ, ತನಿಖೆ ಮುಂದುವರೆಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಸ್ಪತ್ರೆಗೆ ಕೇರಳ ಸಚಿವ ಎಂ.ವಿ.ಗೋವಿಂದನ್ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, 'ರಾಜ್ಯದ ಹೊಟೇಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಕೈಗೊಳ್ಳಲಿದ್ದೇವೆ' ಎಂದರು. ಮೂಲಗಳ ಪ್ರಕಾರ, ಜ್ಯೂಸ್ ಅಂಗಡಿ ಟ್ಯೂಶನ್ ಕೇಂದ್ರವೊಂದರಲ್ಲಿ ಸಮೀಪದಲ್ಲಿದೆ.
ಇದನ್ನೂ ಓದಿ: ಗುಂಡಾಪುರ ಜಲಾಶಯದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು