ETV Bharat / bharat

ಕುಗ್ರಾಮದಿಂದ ರೆಕ್ಕೆ ಬಿಚ್ಚಿ ಹಾರಿದ ಕುವರಿ : ಕರಾವಳಿ ಪ್ರದೇಶದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಈ ಜೆನಿ

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಕೇರಳದ ಜೆನಿ ಸಾಧನೆಯನ್ನು ಶ್ಲಾಘಿಸಿದ್ದಾರೆ. ಜೆನಿ ತಂದೆ ಮಧ್ಯಪ್ರಾಚ್ಯದ ಅಜ್ಮಾನ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಫ್ಯಾಬ್ರಿಕೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದರಿಂದ, ಅವಳು ಮತ್ತು ಅವಳ ಕುಟುಂಬವು ವರ್ಷಗಳಿಂದ ಅಲ್ಲಿ ನೆಲೆಸಿದೆ..

author img

By

Published : May 23, 2021, 11:09 PM IST

ತಿರುವನಂತಪುರಂ : ಕರಾವಳಿ ಕುಗ್ರಾಮದಿಂದ ಬಂದ 23 ವರ್ಷ ಹರೆಯದ ವಾಣಿಜ್ಯ ಪೈಲಟ್ ಜೆನಿ ಜೆರೋಮ್, ಕರಾವಳಿ ಪ್ರದೇಶದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಆಗಿದ್ದು, ಅವರ ಸಾಧನೆ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಫೇಸ್‌ಬುಕ್ ಪುಟದಲ್ಲಿ ಪಿಣರಾಯಿ ವಿಜಯನ್, ಎಲ್ಲಾ ಕಷ್ಟದ ಸನ್ನಿವೇಶಗಳ ವಿರುದ್ಧ ಹೋರಾಡಿ ತನ್ನ ಕನಸುಗಳನ್ನು ನನಸು ಮಾಡಿದ ಜೆನಿಯ ಜೀವನವು ಮಹಿಳೆಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಬರೆದಿದ್ದಾರೆ.

ಕರಾವಳಿ ಕುಗ್ರಾಮವಾದ ಕೊಚುತುರಾದಿಂದ ಬಂದ ಯುವತಿ ಜೆನಿ ಕಳೆದ ರಾತ್ರಿ ಶಾರ್ಜಾದಿಂದ ತಿರುವನಂತಪುರಂಗೆ ನಿಗದಿಯಾಗಿದ್ದ ಏರ್ ಅರೇಬಿಯಾ ವಿಮಾನದ ಸಹ ಪೈಲಟ್ ಆಗಿದ್ದು, ಇದು ಅವರ ಮೊದಲ ಹಾರಾಟವೂ ಆಗಿದೆ. ಜೆನಿ ಅವರನ್ನು ದಕ್ಷಿಣ ರಾಜ್ಯದ ಕರಾವಳಿ ಪ್ರದೇಶದಿಂದ ಬಂದ ಮೊದಲ ವಾಣಿಜ್ಯ ಪೈಲಟ್ ಎಂದು ಹೇಳಲಾಗಿದೆ.

'ಜೆನಿಯ ಕನಸುಗಳನ್ನು ಮತ್ತು ಆಶಯಗಳನ್ನು ಬೆಂಬಲಿಸಿದ ಕುಟುಂಬವು ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಹೆಣ್ಣುಮಕ್ಕಳಿಗೆ ಬೆಂಬಲವನ್ನು ನೀಡುವ ಮಾದರಿಯನ್ನು ಅಳವಡಿಸಿಕೊಳ್ಳಲು ಇಡೀ ಸಮಾಜ ಸಿದ್ಧರಾಗಿರಬೇಕು. ಜೆನಿ ಇನ್ನೂ ಎತ್ತರಕ್ಕೆ ಏರಲಿ ಎಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ 'ಎಂದು ಮುಖ್ಯಮಂತ್ರಿ ಹೇಳಿದರು.

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಕೇರಳದ ಜೆನಿ ಸಾಧನೆಯನ್ನು ಶ್ಲಾಘಿಸಿದ್ದಾರೆ. ಜೆನಿ ತಂದೆ ಮಧ್ಯಪ್ರಾಚ್ಯದ ಅಜ್ಮಾನ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಫ್ಯಾಬ್ರಿಕೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದರಿಂದ, ಅವಳು ಮತ್ತು ಅವಳ ಕುಟುಂಬವು ವರ್ಷಗಳಿಂದ ಅಲ್ಲಿ ನೆಲೆಸಿದೆ.

ತನ್ನ 12ನೇ ತರಗತಿ ಮುಗಿದ ನಂತರ, ಜೆನಿ ತನ್ನ ಬಾಲ್ಯದ ಕನಸನ್ನು ನನಸಾಗಿಸಲು ವಾಯುಯಾನ ಅಕಾಡೆಮಿಗೆ ಸೇರಿದಳು. ಈಗ ಲಾಕ್‌ಡೌನ್ ಕಾರಣದಿಂದಾಗಿ ಹುಟ್ಟೂರು ಕೊಚುತುರಾಕ್ಕೆ ಮರಳಿದ್ದಾಳೆ ಎಂದು ಅವರ ಸಹೋದರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.