ಹೈದರಾಬಾದ್: ಕೇರಳದಲ್ಲಿನ ಈ ಸಾರಿಯ ವಿಧಾನಸಭೆ ಚುನಾವಣಾ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂದು ಸುದ್ದಿ ಸಂಸ್ಥೆಗಳು ಸಮೀಕ್ಷೆ ನಡೆಸಿ ವರದಿ ಪ್ರಕಟ ಮಾಡಿವೆ.
ಕೇರಳ ವಿಧಾನಸಭೆಯ 140 ಸ್ಥಾನಗಳಿಗೆ ನಡೆದ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆದವು. ಮತ ಎಣಿಕೆ ಕಾರ್ಯ ಮೇ 2 ರಂದು ನಡೆಯುತ್ತದೆ. ಈ ಬೆನ್ನಲ್ಲೇ ಆಯ್ದ ಪ್ರದೇಶಗಳಲ್ಲಿನ ಸೀಮಿತ ಸಂಖ್ಯೆಯ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಪೂರ್ವ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ ಯಾವುದೂ 100 ಪ್ರತಿಶತದಷ್ಟು ನಿಖರತೆಯ ದಾಖಲೆಯನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ.


