ನವದೆಹಲಿ: ಎರಡು ದಿನಗಳ ಉತ್ತರ ಪ್ರದೇಶ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಉಚಿತ ಪ್ರವಾಸದ ಭರವಸೆ ನೀಡಿದ್ದು, ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಯುಪಿ ಪ್ರವಾಸದಲ್ಲಿರುವ ಕೇಜ್ರಿವಾಲ್, ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ ಮಾಡಲಾಗುವುದು ಎಂದಿದ್ದಾರೆ.
ಮಹಾ ಆರತಿಯಲ್ಲಿ ಭಾಗಿಯಾದ ಕೇಜ್ರಿವಾಲ್
-
मां सरयू नदी के पवित्र तट पर महाआरती में शामिल होकर मां का वंदन किया एवं उनका आशीर्वाद लिया। बेहद आनंदित माहौल था। pic.twitter.com/xagM50uBZw
— Arvind Kejriwal (@ArvindKejriwal) October 25, 2021 " class="align-text-top noRightClick twitterSection" data="
">मां सरयू नदी के पवित्र तट पर महाआरती में शामिल होकर मां का वंदन किया एवं उनका आशीर्वाद लिया। बेहद आनंदित माहौल था। pic.twitter.com/xagM50uBZw
— Arvind Kejriwal (@ArvindKejriwal) October 25, 2021मां सरयू नदी के पवित्र तट पर महाआरती में शामिल होकर मां का वंदन किया एवं उनका आशीर्वाद लिया। बेहद आनंदित माहौल था। pic.twitter.com/xagM50uBZw
— Arvind Kejriwal (@ArvindKejriwal) October 25, 2021
ಇದನ್ನೂ ಓದಿರಿ: ಯೂಟ್ಯೂಬ್ ನೋಡಿ, ಮಗುವಿಗೆ ಜನ್ಮ ನೀಡಿದ 17 ವರ್ಷದ ಶಾಲಾ ವಿದ್ಯಾರ್ಥಿನಿ!
ದೆಹಲಿಯಲ್ಲಿನ ವೃದ್ಧರಿಗೆ ಯಾವುದೇ ರೀತಿಯ ವೆಚ್ಚವಿಲ್ಲದೆ ರಾಮ್ ಲಲ್ಲಾನ ಆಶೀರ್ವಾದ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.ಅಯೋಧ್ಯೆಗೆ ಭೇಟಿ ನೀಡಿ, ರಾಮ್ ಲಲ್ಲಾನ ಆಶೀರ್ವಾದ ಪಡೆದುಕೊಂಡ ಕೇಜ್ರಿವಾಲ್, ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ದೆಹಲಿಯಲ್ಲಿ ಈಗಾಗಲೇ ಅನೇಕ ಜನಪ್ರೀಯ ಘೋಷಣೆ ಕೂಗಿ ಜನಮನಗೆದ್ದಿರುವ ಕೇಜ್ರಿವಾಲ್ ಸರ್ಕಾರ ಇದೀಗ ಗುಜರಾತ್, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲೂ ತಮ್ಮ ಪಕ್ಷ ವಿಸ್ತರಣೆ ಮಾಡಲು ಮುಂದಾಗಿದೆ.
ಕೇಜ್ರಿವಾಲ್ ಸರ್ಕಾರ ಈಗಾಗಲೇ ಪುರಿ ಜಗನ್ನಾಥ, ಉಜ್ಜೈನಿ, ಶಿರಡಿ, ಅಮೃತಸರ,ತಿರುಪತಿ, ದ್ವಾರಕಾ, ರಾಮೇಶ್ವರ, ಹರಿದ್ವಾರ ಹಾಗೂ ಮಥುರಾ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ವೃದ್ಧರಿಗೆ ಯೋಜನೆ ಘೋಷಣೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ 403 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷ ಕೂಡ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ನಿರ್ಧಾರ ಕೈಗೊಂಡಿದೆ.