ETV Bharat / bharat

ಕೇದಾರನಾಥ ಸುತ್ತಲೂ 15 ಅಡಿ ಹಿಮಾವೃತ: ಈ ಬಾರಿ ಹಿಮ ನದಿಗಳಲ್ಲಿ ಯಾತ್ರಿಕರ ಪಯಣ

ಉತ್ತರಾಖಂಡದ ಕೇದಾರನಾಥ ಸುತ್ತಲು ನಿರಂತರವಾಗಿ ಪ್ರತಿದಿನ ಸಂಜೆ ಹಿಮ ಬೀಳುತ್ತಿದೆ. ಇದರಿಂದ 15 ಅಡಿ ಹಿಮಾವೃತವಾಗಿದ್ದು, ರಸ್ತೆ ಮಾರ್ಗಗಳಲ್ಲಿ ಹಿಮ ತೆರವು ಕಾರ್ಯಾಚರಣೆ ನಡೆಯುತ್ತಿದೆ.

kedarnath-yatra-pilgrims-will-have-to-wade-through-dense-glaciers
ಕೇದಾರನಾಥ ಸುತ್ತಲು 15 ಅಡಿ ಹಿಮಾವೃತ
author img

By

Published : Apr 9, 2023, 1:43 PM IST

ರುದ್ರಪ್ರಯಾಗ (ಉತ್ತರಾಖಂಡ): ದೇಶದ ಪ್ರಮುಖ ಕೇದಾರನಾಥ ಧಾಮಕ್ಕೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 25ರಂದು ಕೇದಾರನಾಥ ಧಾಮದ ಬಾಗಿಲು ತೆರೆಯಲಿದೆ. ಸದ್ಯದ ಪ್ರತಿಕೂಲದ ಹವಾಮಾನವು ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಹೀಗಾಗಿ ಧಾಮಕ್ಕೆ ಬರುವ ಯಾತ್ರಾರ್ಥಿಗಳು ಹಿಮನದಿಗಳ ಮೂಲಕ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗುತ್ತದೆ.

ಇದನ್ನೂ ಓದಿ: ಗಂಗೋತ್ರಿ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಹಿಮ ಚಿರತೆ ಪ್ರತ್ಯಕ್ಷ

ಉತ್ತರಾಖಂಡದ ಹಲವೆಡೆ ಪ್ರತಿದಿನ ಸಂಜೆ ಹಿಮ ಬೀಳುತ್ತಿದೆ. ಜೊತೆಗೆ ವಿಪರೀತವಾದ ಚಳಿ ಇದೆ. ಈ ಬಾರಿಯ ಭಾರೀ ಹಿಮಪಾತದಿಂದಾಗಿ ನಡಿಗೆಯ ಮಾರ್ಗದುದ್ದಕ್ಕೂ ಅನೇಕ ಕಡೆಗಳಲ್ಲಿ 15 ಅಡಿಗೂ ಹೆಚ್ಚು ಎತ್ತರದ ಹಿಮನದಿಗಳು ನಿರ್ಮಾಣವಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಈ ಹಿಮನದಿಗಳನ್ನು ಕರಗಿಸುವುದು ಕಷ್ಟರಕವಾಗಿದೆ. ಈ ಹಿಮನದಿಗಳನ್ನು ಕತ್ತರಿಸಿ ಧಾಮಕ್ಕೆ ಹೋಗುವ ಮಾರ್ಗವನ್ನು ತೆರವುಗೊಳಿಸಲಾಗಿದೆಯಾದರೂ ಹವಾಮಾನವು ಸುಧಾರಣೆ ಆಗುತ್ತಿಲ್ಲ.

ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್‌ ಜಾಮ್‌, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ

ಈ ಪರಿಸ್ಥಿತಿಗಳ ನಡುವೆ ವಿಶ್ವವಿಖ್ಯಾತ ಕೇದಾರನಾಥ ಯಾತ್ರೆಗೆ ದಿನಗಣನೆ ಶುರುವಾಗಿದೆ. ಏ.25ರಂದು ಧಾಮದ ಬಾಗಿಲು ತೆರೆಯುವ ಮುನ್ನ ಏ.21ರಂದು ಬಾಬಾ ಕೇದಾರರ ಡೋಲಿ ವಿಗ್ರಹದ ಮೆರವಣಿಗೆ ನಡೆಯಲಿದೆ. ಓಂಕಾರೇಶ್ವರ ದೇವಸ್ಥಾನ ಉಖಿಮಠದಿಂದ ಕೇದಾರನಾಥ ಧಾಮಕ್ಕೆ ಹೊರಡಲಿದೆ. ಇದರೊಂದಿಗೆ ಸ್ಥಳೀಯ ಜನರಿಗೆ ಕೇದಾರನಾಥ ಧಾಮಕ್ಕೆ ಭೇಟಿಗೆ ಅವಕಾಶ ನೀಡಲಾಗುತ್ತಿದೆ.

ಭರದಿಂದ ಸಾಗಿದ ಸಿದ್ಧತೆ: ಈ ಬಾರಿ ಮಾರ್ಚ್​ ತಿಂಗಳಲ್ಲೂ ಭಾರೀ ಹಿಮಪಾತವಾಗುತ್ತಿದೆ. ಈ ಕಾರಣದಿಂದಾಗಿ ಲಿಂಚೌಲಿ, ಭೈರವ್ ಗಡೇರಾ ಮುಂತಾದ ಸ್ಥಳಗಳಲ್ಲಿ 15 ಅಡಿಗಿಂತಲೂ ಹೆಚ್ಚು ಹಿಮನದಿಗಳು ರೂಪುಗೊಂಡಿವೆ. ಈ ಹಿಮನದಿಗಳನ್ನು ಕತ್ತರಿಸಿ ಯಾತ್ರಾರ್ಥಿಗಳಿಗೆ ಮಾರ್ಗವನ್ನು ಸಜ್ಜುಗಳಿಸುವ ಕಾರ್ಯದಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಏ.25ರಿಂದ ಕೇದಾರನಾಥ ಯಾತ್ರೆ: ಭರದಿಂದ ಸಾಗುತ್ತಿದೆ ಹಿಮ ತೆರವು ಕಾರ್ಯ

ಆದರೆ, ಈಗಲೂ ಧಾಮನಲ್ಲಿ ನಿರಂತರವಾಗಿ ಕೆಟ್ಟ ಹವಾಮಾನ ಪರಿಸ್ಥಿತಿ ಇದೆ. ವಿಪರೀತವಾದ ಚಳಿ ಕಾರಣದಿಂದಲೂ ಈ ಹಿಮನದಿಗಳನ್ನು ಕರಗಿಸುವುದು ತುಂಬಾ ಕಷ್ಟವಾಗಿದೆ. ಇದರ ನಡುವೆಯೂ ಹಿಮವನ್ನು ತೆಗೆದು ಕೇದಾರನಾಥ ಧಾಮಕ್ಕೆ ದಾರಿ ಸಿದ್ಧಪಡಿಸುವ ಕಾರ್ಯವಾಗುತ್ತಿದೆ ಎಂದು ಡಿಎಂ ಮಯೂರ್ ದೀಕ್ಷಿತ್ ಹೇಳಿದ್ದಾರೆ. ಅಲ್ಲದೇ, ಈಗಾಗಲೇ ಧಾಮ ಯಾತ್ರೆಗೆ ಸಂಬಂಧಿಸಿದಂತೆ ಅಗತ್ಯ ಕೆಲಸ ಆರಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರು ಮತ್ತು ಕಾರ್ಮಿಕರು ಮಾರ್ಗಗಳ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಇನ್ನು, ಏಪ್ರಿಲ್​ 22ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲುಗಳನ್ನು ಯಾತ್ರಾರ್ಥಿಗಳಿಗೆ ತೆರೆಯಲಿವೆ. ಈ ಮೂಲಕ ಚಾರ್ಧಾಮ್ ಯಾತ್ರೆ ಶುರುವಾಗಲಿದ್ದು, ಕೇದಾರನಾಥ ಧಾಮ್ ಏ. 25ರಿಂದ ಆರಂಭವಾಗಲಿದೆ. ಅದೇ ದಿನ ಹೆಲಿಕಾಪ್ಟರ್ ಸೇವೆಯೂ ಪ್ರಾರಂಭವಾಗಲಿದೆ. ಈ ಸೇವೆಗಳ ಬುಕ್ಕಿಂಗ್​​ಅನ್ನು ಈಗಾಗಲೇ ಏಪ್ರಿಲ್ 8ರಿಂದ ಐಆರ್​ಸಿಟಿಸಿ ಶುರು ಮಾಡಿದೆ.

ಇದನ್ನೂ ಓದಿ: ಕೇದಾರನಾಥನ ದರ್ಶನಕ್ಕೆ 40 ದಿನ ಬಾಕಿ: ಪಾದಚಾರಿ ಮಾರ್ಗದಲ್ಲಿ ಹಿಮರಾಶಿ, ತೆರವು ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.