ETV Bharat / bharat

ಬದಲಾದ ಟಿಆರ್​ಎಸ್​.. ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್ - TRS as Bharat Rashtra Samithi

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಅವರು ತಮ್ಮ ರಾಷ್ಟ್ರೀಯ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

kcr-has-finalized-the-name-of-the-party
ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್​
author img

By

Published : Oct 5, 2022, 10:35 AM IST

Updated : Oct 5, 2022, 4:56 PM IST

ಹೈದರಾಬಾದ್(ತೆಲಂಗಾಣ): ರಾಷ್ಟ್ರ ರಾಜಕಾರಣ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ​ರಾವ್​ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದರು. ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್)​ ಎಂದಿದ್ದ ಅವರ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ(ಬಿಆರ್​ಎಸ್​) ಎಂದು ಮರುನಾಮಕರಣ ಮಾಡಿದ್ದಾರೆ.

ಇಂದು ಮಧ್ಯಾಹ್ನ ನಡೆಯುವ ಸಭೆಯಲ್ಲಿ ಪಕ್ಷದ ಹೆಸರನ್ನು ಪ್ರಸ್ತಾಪಿಸಿ ಅನುಮೋದನೆ ಪಡೆಯಲಿದ್ದಾರೆ. ಸಭೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್​.ಡಿ. ಕುಮಾರಸ್ವಾಮಿ, ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮಾವಲವನ್ ಮತ್ತಿತರರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

kcr-has-finalized-the-name-of-the-party
ಹೊಸ ರಾಷ್ಟ್ರೀಯ ಪಕ್ಷ ಬಿಆರ್​ಎಸ್​

ಎಲ್ಲರಿಗೂ ಪರಿಚಿತ ಹೆಸರು: ತೆಲುಗು, ಹಿಂದಿಯಲ್ಲಿ ಸರಳವಾಗಿ ಹೇಳಬಹುದಾದ ಪದ ಇದಾಗಿದ್ದು, ಹಾಗಾಗಿ ಪಕ್ಷಕ್ಕೆ ಭಾರತ್​ ರಾಷ್ಟ್ರ ಸಮಿತಿ ಎಂದು ಹೆಸರಿಸಲಾಗಿದೆ. ಈ ಹೆಸರು ಈಗಾಗಲೇ ದೇಶಾದ್ಯಂತ ಜನರಿಗೆ ಮುಟ್ಟಿದೆ ಎಂದು ಅವರು ಕೆಸಿಆರ್​ ಹೇಳಿದರು.

ನಾಳೆ ದೆಹಲಿಗೆ ಟಿಆರ್‌ಎಸ್ ನಿಯೋಗ: ಅಂತಿಮಗೊಳಿಸಿದ ಪಕ್ಷದ ಹೆಸರ ನಿರ್ಣಯಕ್ಕೆ ಅನುಮೋದನೆ ಪಡೆಯಲು ನಾಳೆ ಟಿಆರ್​ಎಸ್​ ನಿಯೋಗ ದೆಹಲಿಗೆ ತೆರಳಲಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಅಫಿಡವಿಟ್​ ಸಲ್ಲಿಸಲಾಗುತ್ತದೆ. ಬಳಿಕ ಆಯೋಗ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಪಕ್ಷದ ಹೆಸರಿನ ಮೇಲೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

kcr-has-finalized-the-name-of-the-party
ಜೆಡಿಎಸ್ ಎಂಎಲ್​ಸಿ ಭೋಜೇಗೌಡ​ ಜೊತೆ ಸಿಎಂ ಕೆಸಿಆರ್

ಬಿಜೆಪಿ ಟಕ್ಕರ್​ ನೀಡಲು ಕೆಸಿಆರ್​ ಪ್ಲಾನ್: ದೇಶಾದ್ಯಂತ ಬಿಜೆಪಿ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಹೆಸರನ್ನು ಮರುನಾಮಕರಣ ಮಾಡಿದ್ದಾರೆ.

ಜೆಡಿಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ತಮಿಳುನಾಡು ಮೂಲದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ತೊಳ್ ತಿರುಮಾವಳವನ್ ಸೇರಿದಂತೆ ಪಕ್ಷದ ನಾಯಕರನ್ನು ಕೆಸಿಆರ್​ ಆಹ್ವಾನಿಸಿದ್ದಾರೆ.

ನಾಯಕರ ಜೊತೆ ಭೋಜನಕೂಟ: ಕರ್ನಾಟಕದ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ, ಎಚ್​ಡಿ ರೇವಣ್ಣ, ನಿಖಿಲ್​ ಕುಮಾರಸ್ವಾಮಿ ಸೇರಿದಂತೆ ವಿವಿಧ ನಾಯಕರು ಕೆಸಿಆರ್​ ಆಹ್ವಾನದ ಮೇರೆಗೆ ಹೈದರಾಬಾದ್​ಗೆ ಭೇಟಿ ನೀಡಿದ್ದಾರೆ. ವಿಸಿಕೆ ಪಕ್ಷದ ನಾಯಕರೂ ಆಗಮಿಸಿದ್ದು ಭೋಜನಕೂಟ ಏರ್ಪಡಿಸಲಾಗಿತ್ತು. ಬಿಆರ್​ಎಸ್​ ರಾಷ್ಟ್ರೀಯ ಪಕ್ಷವು ವಿವಿಧ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಎಂದು ಜೆಡಿಎಸ್​ ನಾಯಕರೊಬ್ಬರು ಹೇಳಿದ್ದಾರೆ.

kcr-has-finalized-the-name-of-the-party
ಕುಮಾರಸ್ವಾಮಿಗೆ ಸ್ವಾಗತ ಕೋರಿದ ಪಕ್ಷದ ನಾಯಕರು

ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಮಾಡುವುದೇ ಪಕ್ಷದ ಉದ್ದೇಶ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಒಟ್ಟಿಗೆ ಸೇರುವುದರೊಂದಿಗೆ ವಿವಿಧ ಪ್ರಾದೇಶಿಕ ಪಕ್ಷಗಳ ಸಂಯೋಜನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಮಲ್ಲಿಕಾರ್ಜುನ್​ ಖರ್ಗೆಗೆ ರಾಜಸ್ಥಾನ ಸಿಎಂ ಗೆಹ್ಲೋಟ್​ ಬೆಂಬಲ

Last Updated : Oct 5, 2022, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.