ಹೈದರಾಬಾದ್: ಪ್ರಜಾ ಪ್ರಸ್ಥಾನ ಪಾದಯಾತ್ರೆ ಕೈಗೊಳ್ಳಲು ನನಗೆ ಮಾತ್ರ ಕೆಸಿಆರ್ ಸರ್ಕಾರ ಅನುಮತಿ ನಿರಾಕರಿಸಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಯಾಕೆ ಅವಕಾಶ ನೀಡಿದ್ದಾರೆ? ಹಾಗಾದರೆ ನಮಗೇಕೆ ಬೇಡ ? ನನಗೆ ಸಾರ್ವಜನಿಕ ಸಂಪೂರ್ಣ ಬೆಂಬಲವಿದೆ. ನಾನು ಅವರ ಮುಖ್ಯ ಪ್ರತಿಸ್ಪರ್ಧಿ. ಅದು ಅವರಿಗೆ ಗೊತ್ತಾಗಿದೆ. ಈ ಕಾರಣದಿಂದ ಕೆಸಿಆರ್ ಭಯಭೀತವಾಗಿದ್ದು, ವಿಚಲಿತಗೊಂಡಿದ್ದಾರೆ ಎಂದು ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ವ್ಯಂಗ್ಯವಾಗಿ ಕೆಸಿಆರ್ಗೆ ಕುಟುಕಿದರು.
ನನ್ನ ಜನರಿಗೆ ಥಳಿತ: ನಗರದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡು ವೇದಿಕೆಯಲ್ಲಿ ಅವರು ಮಾತನಾಡಿದರು. ನನಗೆ ಅನುಮತಿ ಸಿಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇನೆ. ಮಹಿಳೆಯರು ಸೇರಿದಂತೆ ನನ್ನನು ಥಳಿಸಿದ್ದಾರೆ. ನನ್ನ ಜನರು, ಕಾರ್ಯಕರ್ತರನ್ನು ಬಂಧಿಸಿದ್ದು, ಇನ್ನೂ ಠಾಣೆಯಲ್ಲಿದ್ದಾರೆ. ನನ್ನ ಜನರನ್ನು ಇಂದು ಭೇಟಿಯಾಗದಿರಲು ತಡೆ ಹಿಡಿಯಲಾಗಿದೆ. ಇಡೀ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿ ಬಿಗಿಭದ್ರತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂಜರಿಯಲಾರೆ: ನನಗೆ ಏನಾದರೂ ಸರಿ. ನನ್ನ ಪಕ್ಷದ ಕಾರ್ಯಕರ್ತರನ್ನು, ಜನರನ್ನು ಬಿಡುಗಡೆ ಮಾಡಿಸುವೆ. ನನ್ನ ವಿರುದ್ಧ ಕೆಸಿಆರ್ ಏನೇ ಕ್ರಮ ಕೈಗೊಂಡಿದ್ದರೂ ನಾನು ಇಟ್ಟ ಹೆಜ್ಜೆ ಹಿಂದೆ ಇಡಲಾರೆ ಎಂದು ತಿರುಗೇಟು ನೀಡಿದರು.
ಕೆಸಿಆರ್ ಕಾಲಾಳು ಪೊಲೀಸ್ ಇಲಾಖೆ: ತೆಲಂಗಾಣ ಪೊಲೀಸರು ಕೆಸಿಆರ್‌ನ ಕಾಲಾಳುಗಳಂತೆ ವರ್ತಿಸುತ್ತಿದ್ದಾರೆ. ನನ್ನನು ಥಳಿಸಿದ ವೇಳೆ ಪೊಲೀಸರು ಏನು ಕ್ರಮ ಕೈಗೊಳ್ಳದೇ ನಿಸ್ಸಾಯಕರಾಗಿದ್ದಾರೆ. ನನ್ನ ಜನರ ಮೇಲೆ ಪೊಲೀಸರು ದೌರ್ಜನ್ಯ ವೆಸಗಿದ್ದಾರೆ. ಇದು ಕೆಸಿಆರ್ ಸರ್ಕಾರದ ಪೊಲೀಸರ ದೌರ್ಜನ್ಯ ಎಂದು ಆರೋಪಿಸಿದರು.
ಇದನ್ನೂಓದಿ:ಇಂದು ಕಲಬುರಗಿಗೆ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ.. ಅದ್ಧೂರಿ ಮೆರವಣಿಗೆಗೆ ಕಾರ್ಯಕರ್ತರು ರೆಡಿ!