ಶ್ರೀನಗರ (ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು-ಕಾಶ್ಮೀರದ ಯುವಕನೋರ್ವ ರಾತ್ರೋರಾತ್ರಿ ಕೋಟ್ಯಾಧೀಶನಾಗಿದ್ದಾನೆ. ಆನ್‌ಲೈನ್ ಫ್ಯಾಂಟಸಿ ಕ್ರಿಕೆಟ್ ಪ್ಲಾಟ್‌ಫಾರ್ಮ್ ಡ್ರೀಮ್-11ರಲ್ಲಿ ಎರಡು ಕೋಟಿ ರೂಪಾಯಿ ಗೆದ್ದಿದ್ದಾನೆ. ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಶಾಲ್ಗಾಮ್ ಗ್ರಾಮದ ವಸೀಂ ರಾಜಾ ಈ ಜಾಕ್ಪಾಟ್ ಹೊಡೆದಿದ್ದಾನೆ.
ಶನಿವಾರ ತಡರಾತ್ರಿ ನಾನು ಗಾಢ ನಿದ್ದೆಯಲ್ಲಿದ್ದೆ. ಆಗ ಕೆಲವು ಸ್ನೇಹಿತರು ನನಗೆ ಕರೆ ಮಾಡಿ ಡ್ರೀಮ್-11ರಲ್ಲಿ ನೀನು ಮೊದಲ ಸಂಖ್ಯೆಯಲ್ಲಿ ಇದಿಯ ತಿಳಿಸಿದರು ಎಂದು ವಸೀಂ ಹೇಳಿಕೊಂಡಿದ್ದಾನೆ. ಈ ಹಣದಿಂದ ಈಗ ತಮ್ಮ ಅನಾರೋಗ್ಯ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾನೆ.
ಇದನ್ನೂ ಓದಿ: ಐಪಿಎಲ್ ಎಲಿಮಿನೇಟರ್ನಲ್ಲಿ ಆರ್ಸಿಬಿ ಫೈಟ್: ಪ್ಲೇ ಆಫ್ ಹಂತ, ಫೈನಲ್ ಮಾಹಿತಿ ಇಲ್ಲಿದೆ
ಅಲ್ಲದೇ, ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಫ್ಯಾಂಟಸಿ ತಂಡಗಳನ್ನು ರಚಿಸುವ ಮೂಲಕ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದೆ. ಕನಸಿನ ರೀತಿಯಲ್ಲಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಕ್ಕೆ ಸೇರಿದ ನಾನು ಬಡತನದಿಂದ ಹೊರಬರಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದ್ದಾನೆ. ಎರಡು ಕೋಟಿ ರೂಪಾಯಿ ಗೆದ್ದ ಹಿನ್ನೆಲೆಯಲ್ಲಿ ವಸೀಂ ರಾಜಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ: ಟಿಎಂಸಿಗೆ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಜಂಪ್!?