ನವದೆಹಲಿ: ಕಾಶ್ಮೀರದ ರಾಜಕೀಯ ನಾಯಕನ ಶವ ದೆಹಲಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ತ್ರಿಲೋಚನ್ ಸಿಂಗ್ ವಾಜೀರ್ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
67 ವರ್ಷದ ತ್ರಿಲೋಚನ್ ಸಿಂಗ್ ವಾಜೀರ್ ಅವರು ಮೃತಪಟ್ಟಿದ್ದಾರೆ, ಅವರ ಮೃತದೇಹ ಪಶ್ಚಿಮ ದೆಹಲಿಯ ಮೋತಿ ನಗರದ ಬಸಾಯಿ ದರಾಪುರ ಪ್ರದೇಶದ ಫ್ಲಾಟ್ನಲ್ಲಿ ಪತ್ತೆಯಾಗಿದೆ ಎಂದು ಪಶ್ಚಿಮ ದೆಹಲಿ ಡಿಸಿಪಿ ಉರ್ವಿಜಾ ಗೋಯಲ್ ಹೇಳಿದ್ದಾರೆ.
ತ್ರಿಲೋಚನ್ ಸಿಂಗ್ ವಜೀರ್ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.