ETV Bharat / bharat

ಸುವರ್ಣ ಘಟ್ಟದಲ್ಲಿದೆ ಕಾಶ್ಮೀರ ಪ್ರವಾಸೋದ್ಯಮ: ಲೆ.ಗವರ್ನರ್‌ ಮನೋಜ್ ಸಿನ್ಹಾ - ಸುವರ್ಣ ಅವಧಿಯಲ್ಲಿದೆ ಕಾಶ್ಮೀರದ ಪ್ರವಾಸೋದ್ಯಮ

ಕಣಿವೆ ನಾಡಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಮನೋಜ್​ ಸಿನ್ಹಾ ಹೇಳಿದ್ದಾರೆ.

Kashmir Tourism
ಕಾಶ್ಮೀರದ ಪ್ರವಾಸೋದ್ಯಮ
author img

By

Published : Apr 10, 2022, 4:38 PM IST

ಶ್ರೀನಗರ: ಪ್ರವಾಸೋದ್ಯಮದ ವಿಷಯದಲ್ಲಿ ಕಾಶ್ಮೀರವು 'ಸುವರ್ಣ ಅವಧಿ'ಗೆ ಸಾಕ್ಷಿಯಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದರು. ಕಳೆದ ಕೆಲವು ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ 80 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಆಗಮಿಸಿರುವುದು ಪ್ರಮುಖ ಸಾಧನೆ. ಪ್ರವಾಸಿಗರ ಆಗಮನ ಮತ್ತು ವಿಮಾನ ಕಾರ್ಯಾಚರಣೆಗಳು 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿವೆ ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ಇತಿಹಾಸದಲ್ಲಿ ಇದು ಸುವರ್ಣ ಕಾಲಘಟ್ಟವಾಗಿದ್ದು, ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಸಂಪೂರ್ಣ ಪ್ರಯೋಜನ ಪಡೆಯಬೇಕು. ದೊಡ್ಡಮಟ್ಟದ ಪ್ರವಾಸಿಗರ ಸಂಖ್ಯೆಯು ಈ ಹಿಂದಿನ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾರಾಟದ ಕಾರ್ಯಾಚರಣೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಎಲ್ಲಾ ಹೋಟೆಲ್‌ಗಳು ಮುಂಗಡ ಬುಕ್ಕಿಂಗ್ ಆಗಿವೆ. ದೇಶದ ಇತರ ರಾಜ್ಯಗಳ ಜನರು ಶ್ರೀನಗರಕ್ಕೆ ವಿಮಾನ ಟಿಕೆಟ್ ಪಡೆಯಲು ಕಷ್ಟಪಡುವಂತಾಗಿದೆ ಎಂದು ಮನೋಜ್​ ಸಿನ್ಹಾ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಸರ್ಕಾರ ಸ್ಥಳೀಯರ ಜತೆಗೂಡಿ ದಾಲ್ ಸರೋವರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸರೋವರವನ್ನು ಕಳೆಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಲಾಗಿದೆ ಎಂದು ಸಿನ್ನಾ ಹೇಳಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ: ಎನ್​​ಕೌಂಟರ್​ನಲ್ಲಿ ಇಬ್ಬರು ಉಗ್ರ ಹತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.