ಮುಂಬೈ (ಮಹಾರಾಷ್ಟ್ರ): ಭಾನುವಾರ ಇಲ್ಲಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022' ಪ್ರಶಸ್ತಿ ಗೆದ್ದರು. ಒಟ್ಟು 31 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿದ ಅವರು ಅದ್ಭುತ ಸ್ಥಾನಮಾನ ಪಡೆದರು. ರಾಜಸ್ಥಾನದ ರೂಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಉತ್ತರ ಪ್ರದೇಶದ ಶಿಂತಾ ಚೌಹಾನ್ ಎರಡನೇ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು.
ಪ್ರತಿ ಬಾರಿಯಂತೆ ಈ ವರ್ಷದ ಸ್ಪರ್ಧೆ ಕೂಡಾ ಕಠಿಣ ಮತ್ತು ಆಕರ್ಷಕವಾಗಿತ್ತು. ಆರು ಮಂದಿ ತೀರ್ಪುಗಾರರ ಸಮಿತಿಯು ಸ್ಪರ್ಧಿಗಳ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ವಿಜೇತರನ್ನು ಆಯ್ಕೆ ಮಾಡಿದೆ. ತೀರ್ಪುಗಾರರ ಸಮಿತಿಯಲ್ಲಿ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೋರಿಯಾ, ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಮಕ್ ಡಾಬರ್ ಇದ್ದರು.
ಇವರಲ್ಲದೆ, ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೃತಿ ಸನೋನ್ ಸೇರಿದಂತೆ ಅನೇಕ ನಟಿಯರು ರೆಡ್ ಕಾರ್ಪೆಟ್‌ನಲ್ಲಿ ಮೋಡಿ ಮಾಡಿದರು. ಮಿಸ್ ಇಂಡಿಯಾ ಕಿರೀಟ ಗೆದ್ದು 20 ವರ್ಷಗಳಾದ ಕಾರಣ ನೇಹಾ ಧೂಪಿಯಾ ಅವರಿಗೂ ಈ ಸಂದರ್ಭ ವಿಶೇಷ ಅನುಭವ ನೀಡಿತು. ಅವರ ಯಶಸ್ಸನ್ನೂ ಕಾರ್ಯಕ್ರಮದದಲ್ಲಿ ಸಂಭ್ರಮಿಸಲಾಯಿತು.
ವರ್ಣರಂಜಿತ ಮಿಸ್ ಇಂಡಿಯಾ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ದೊಡ್ಡಮಟ್ಟದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ಸೌಂದರ್ಯ ಹಾಗೂ ಸ್ಪಾಟ್ ಆನ್ ರೆಸ್ಪಾನ್ಸ್ ಸ್ಟೈಲ್ನಿಂದ ಗಮನ ಸೆಳೆದರು.
ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣಕನ್ನಡ ಮೂಲದ 21 ವರ್ಷದ ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನೃತ್ಯದ ಬಗ್ಗೆಯೂ ಅಪಾರ ಒಲವು ಹೊಂದಿರುವ ಇವರು ಭರತನಾಟ್ಯ ಕಲಾವಿದೆಯೂ ಹೌದು. ಇವರು ತಮ್ಮ 4ನೇ ವಯಸ್ಸಿನಲ್ಲೇ ನೃತ್ಯಾಭ್ಯಾಸ ಶುರು ಮಾಡಿದ್ದರು. 14ನೇ ವಯಸ್ಸಿನವರೆಗೂ ಅನೇಕ ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಸಿನಿಶೆಟ್ಟಿ ಕರ್ನಾಟಕದ ನಿವಾಸಿಯಾಗಿದ್ದರೂ ಹುಟ್ಟಿ ಬೆಳೆದಿದ್ದೆಲ್ಲವೂ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ.
-
Grateful 🙏🏼
— Sini Shetty (@sini_shetty) July 3, 2022 " class="align-text-top noRightClick twitterSection" data="
Thanks to each and every one who've supported me in this journey 🥲♥️
Your Miss India 2022 - Sini Shetty
.
.
.#SiniShetty #FeminaMissIndia2022#MissIndia2022 #MissIndia pic.twitter.com/coQkwMMVdc
">Grateful 🙏🏼
— Sini Shetty (@sini_shetty) July 3, 2022
Thanks to each and every one who've supported me in this journey 🥲♥️
Your Miss India 2022 - Sini Shetty
.
.
.#SiniShetty #FeminaMissIndia2022#MissIndia2022 #MissIndia pic.twitter.com/coQkwMMVdcGrateful 🙏🏼
— Sini Shetty (@sini_shetty) July 3, 2022
Thanks to each and every one who've supported me in this journey 🥲♥️
Your Miss India 2022 - Sini Shetty
.
.
.#SiniShetty #FeminaMissIndia2022#MissIndia2022 #MissIndia pic.twitter.com/coQkwMMVdc
ಇದನ್ನೂ ಓದಿ: 'ತಂದೆಯ ಆಟೋದಲ್ಲಿ ಬಂದ ಮಿಸ್ ಇಂಡಿಯಾ ರನ್ ಅಪ್ -2020 ಮಾನ್ಯ'