ETV Bharat / bharat

ಕರ್ನಾಟಕ ಸೇರಿ ದೇಶದ 14 ವಿಧಾನಸಭೆ, 2 ಲೋಕಸಭೆ ಕ್ಷೇತ್ರಗಳ ಬೈಎಲೆಕ್ಷನ್​ಗೆ ದಿನಾಂಕ ಪ್ರಕಟ - ಕರ್ನಾಟಕ ಬೈಎಲೆಕ್ಷನ್​ ದಿನಾಂಕ

Election Commission of India
Election Commission of India
author img

By

Published : Mar 16, 2021, 5:12 PM IST

Updated : Mar 16, 2021, 6:22 PM IST

17:09 March 16

ರಾಜ್ಯದ 1 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳಿಗೆ ಏ.17ರಂದು ಉಪಚುನಾವಣೆ

  • Voting for by-polls to two parliamentary constituencies of Andhra Pradesh and Karnataka and 14 constituencies in various States to be held on 17th April: Election Commission of India pic.twitter.com/CahOU7CLNI

    — ANI (@ANI) March 16, 2021 " class="align-text-top noRightClick twitterSection" data=" ">

ನವದೆಹಲಿ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಒಳಗೊಂಡಂತೆ ದೇಶದ 14 ವಿಧಾನಸಭೆ ಹಾಗೂ ಎರಡು ಲೋಕಸಭೆ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ಹಾಗಾಗಿ, ಎಲ್ಲ ಕ್ಷೇತ್ರಗಳಲ್ಲೂ ಇಂದಿನಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.  

ಕರ್ನಾಟಕದ ಎರಡು ವಿಧಾನಸಭೆ ಕ್ಷೇತ್ರಗಳಾದ ಬಸವಕಲ್ಯಾಣ ಹಾಗೂ ಮಸ್ಕಿ ಜತೆಗೆ ಕೇಂದ್ರ ಸಚಿವ ಸುರೇಶ್​ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.  

ಉಳಿದಂತೆ ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ. ಗುಜರಾತ್​ನ ಮೊರ್ವಾ ಹಡಾಫ್, ಜಾರ್ಖಂಡ್​ನ ಮಾಧಾಪೂರ್​, ಮಧ್ಯಪ್ರದೇಶದ ದಮೋಹಾ, ಮಹಾರಾಷ್ಟ್ರದ ಪಂಢರಾಪುರ್​, ಮಿಜೋರಾಂ, ನಾಗಲ್ಯಾಂಡ್​, ಒಡಿಶಾ, ರಾಜಸ್ಥಾನದ ಮೂರು, ತೆಲಂಗಾಣದ ಹಾಗೂ ಉತ್ತರಾಖಂಡ್​ನ ಒಂದು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.  

ಚುನಾವಣಾ ಪ್ರಕ್ರಿಯೆ:

ಮಾರ್ಚ್​​ 23ರಂದು ಚುನಾವಣೆಗೆ ಅಧಿಸೂಚನೆ

ಮಾರ್ಚ್​ 30ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆ ದಿನ.

ಮಾರ್ಚ್​ 31ರಂದು ನಾಮಪತ್ರ ಪರಿಶೀಲನೆ

ಏಪ್ರಿಲ್​​ 3ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನ.

ಈ ಎಲ್ಲಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯ ಫಲಿತಾಂಶ ಮೇ 2ರಂದು ಹೊರಬೀಳಲಿದೆ.

Last Updated : Mar 16, 2021, 6:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.