ಗಾಂಧಿನಗರ(ಗುಜರಾತ್): ಸೋಮಶೇಖರ್ ರೆಡ್ಡಿ ಅಧ್ಯಕ್ಷತೆಯಲ್ಲಿ ಬಿಜೆಪಿ ಶಾಸಕರ ತಂಡವೊಂದು ಗುಜರಾತ್ ಪ್ರವಾಸ ಕೈಗೊಂಡಿದೆ. ಈ ವೇಳೆ ಗುಜರಾತ್ ವಿಧಾನಸಭೆ, ಅಮುಲ್ ಡೈರಿ ಮತ್ತು ಏಕತಾ ಪ್ರತಿಮೆಗೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿರುವ ಅವರು, ಗುಜರಾತ್ ನಂಬರ್ 1 ರಾಜ್ಯ ಎಂದು ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯ ವಿಧಾನಮಂಡಲದ ಮತ್ತೊಂದು ಸಮಿತಿ ಇದೀಗ ಅಧ್ಯಯನಕ್ಕೋಸ್ಕರ ಗುಜರಾತ್ ಪ್ರವಾಸ ಕೈಗೊಂಡಿದೆ. ಈ ವೇಳೆ ಗುಜರಾತ್ ವಿಧಾನಸಭೆ, ಅಮುಲ್ ಡೈರಿ, ಏಕತಾ ಪ್ರತಿಮೆಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿರುವ ಸೋಮಶೇಖರ್ ರೆಡ್ಡಿ, ಅಮುಲ್ ಡೈರಿ ರೈತರಿಗೆ ಹೇಗೆ ಅನುಕೂಲವಾಗಿದೆ ಎಂಬುದರ ಬಗ್ಗೆ ನಾವು ಕಲಿತ್ತಿದ್ದೇವೆ. ಇದರ ಜೊತೆಗೆ ಏಕತಾ ಪ್ರತಿಮೆಗೂ ಭೇಟಿ ನೀಡಿದ್ದೇವೆ. ಗುಜರಾತ್ ವಿಧಾನಸಭೆಯ ಕಾರ್ಯದರ್ಶಿ ಅವರನ್ನ ಭೇಟಿ ಮಾಡಿ, ಇಲ್ಲಿನ ವಿಧಾನಸಭೆ ಕಾರ್ಯನಿರ್ವಹಿಸುವ ಬಗ್ಗೆ ಚರ್ಚೆ ನಡೆಸಿದೆವು ಎಂದರು. ಇದೇ ವೇಳೆ, ಮುಂದುವರಿದು, ಅಭಿವೃದ್ಧಿಯಲ್ಲಿ ಗುಜರಾತ್ ನಂಬರ್ 1 ರಾಜ್ಯವಾಗಿದೆ ಎಂದರು.
ಇದನ್ನೂ ಓದಿರಿ: 12 ವರ್ಷಗಳ ಹಿಂದೆ ಪ್ರೇಮ ವಿವಾಹ, ದೀಕ್ಷೆ ಪಡೆದುಕೊಂಡ ಜೋಡಿ!
ಅಮುಲ್ ಡೈರಿಯಿಂದ ಕರ್ನಾಟಕದಲ್ಲಿ ಕೆಎಂಎಫ್ ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ವಿದ್ಯುತ್ ಉತ್ಪಾದಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು. ಬಿಜೆಪಿ ಸಮಿತಿಯಲ್ಲಿ ಸಿ.ಎಸ್ ಪುಟ್ಟರಾಜು, ಡಾ. ಅಂಜಲಿ ನಿಂಬಾಳ್ಕರ್, ಶರಣು ಸಲಗಾರ್, ಅರುಣ್ ಕುಮಾರ್ ಗುತ್ತೂರು, ಕೆ.ವಿ ನಂಜೇಗೌಡ, ಆರ್.ಶಂಕರ್, ಸಿ.ಎಂ. ಲಿಂಗಪ್ಪ, ಎನ್. ರವಿಕುಮಾರ್ ಇದ್ದಾರೆ.