ಮುಂಗೇರ್(ಬಿಹಾರ್)/ಹಾವೇರಿ : ಬಿಹಾರದ ಎಸ್‌ಟಿಎಫ್ ಕರ್ನಾಟಕ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಮುಂಗೇರ್‌ನಿಂದ ಮೂವರು ಕುಖ್ಯಾತ ಕ್ರಿಮಿನಲ್‌ಗಳನ್ನು ಬಂಧಿಸಿದೆ. ಮೊಹಮ್ಮದ್ ಶಂಶಾದ್ ಆಲಂ, ಮೊಹಮ್ಮದ್ ಶಾಹಿದ್ ಚಂದ್ ಮತ್ತು ಮೊಹಮ್ಮದ್ ಆಸಿಫ್ ಆಲಂ ಬಂಧಿತರು.
ಅಪರಾಧಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪದ ಹಿನ್ನೆಲೆ ಈ ಮೂವರ ವಿರುದ್ಧ ಎಪ್ರಿಲ್19 ರಂದು ಕರ್ನಾಟಕದ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂವರೂ ಕ್ರಿಮಿನಲ್ ಮಂಜುನಾಥ್ ಅಲಿಯಾಸ್ ಮಲಿಕ್ ಎಂಬುವನಿಗೆ ಕರ್ನಾಟಕದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದರು ಎಂದು ಆರೋಪಿಸಲಾಗಿದೆ. ಹಾವೇರಿಯಲ್ಲಿ ಉದ್ಯಮಿ ಬಸಂತ್ ಕುಮಾರ್ ಮೇಲೆ ಕುಖ್ಯಾತ ಪಾತಕಿಗಳಾದ ಮಂಜುನಾಥ್ ಮತ್ತು ಸೋನು ಮಲಿಕ್ ಗುಂಡಿನ ದಾಳಿ ನಡೆಸಿದ್ದರು.
ಸುದೀರ್ಘ ಹುಡುಕಾಟ: ಮೂವರು ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಕರ್ನಾಟಕದ ಪೊಲೀಸರು ಬಿಹಾರ ಪೊಲೀಸರನ್ನು ಸಂಪರ್ಕಿಸಿದ್ದರು. ಅವರ ಬಂಧನಕ್ಕಾಗಿ ಎಸ್‌ಟಿಎಫ್‌ನ ವಿಶೇಷ ತಂಡ ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಇದನ್ನೂ ಓದಿ: ನೆಹರು ಹಲವಾರು ಸಂಸ್ಥೆ ಕಟ್ಟಿದರು-ಮೋದಿ ಅವುಗಳನ್ನು ಮಾರಿದ್ರು: ಸಲೀಂ ಅಹ್ಮದ್