ETV Bharat / bharat

ಕಗ್ಗತ್ತಲಿನಲ್ಲಿ ಸರಳವಾಗಿಯೇ ಹಾವು ಹಿಡಿಯುತ್ತಾಳೆ ಈ ಹಾವು‘ರಾಣಿ’! - ತೆಲಂಗಾಣದ ಕರೀಂನಗರ

ಬಹುತೇಕ ಮಹಿಳೆಯರಿಗೆ ಜಿರಳೆ ಕಂಡ್ರನೇ ಸಾಕು ಅರ್ಧ ಕಿಲೋ ಮೀಟರ್​ಗಟ್ಟಲೇ​ ಓಡ್ತಾರೆ. ಅಂತಹುದರಲ್ಲಿ ಹಾವು ನೋಡಿದ್ರೆ ಅವರ ಪರಿಸ್ಥಿತಿ ಹೇಗಿರುತ್ತೆ ಎಂದು ಹೇಳುವ ಅವಶ್ಯಕತೆ ಇಲ್ಲ ಬಿಡಿ. ಆದರೆ ಇದಕ್ಕೆ ಭಿನ್ನವಾಗಿ ಮಹಿಳೆಯೊಬ್ಬಳು ಯಾವುದೇ ಭಯ ಇಲ್ಲದೇ ಹಾವುಗಳನ್ನು ಸರಳವಾಗಿಯೇ ಹಿಡಿಯುತ್ತಾರೆ. ಈ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಮಹಿಳೆ ಬಗ್ಗೆ ಒಂಚೂರು ತಿಳಿಯೋಣ ಬನ್ನಿ...

Karimnagar female snake catcher, Karimnagar female snake catcher shabana, Karimnagar female snake catcher shabana story, Karimnagar female snake catcher news, ಕರೀಂನಗರ ವುಮೆನ್​ ಸ್ನೇಕ್​ ಕ್ಯಾಚರ್​, ಕರೀಂನಗರ ವುಮೆನ್​ ಸ್ನೇಕ್​ ಕ್ಯಾಚರ್​ ಶಬಾನಾ, ಕರೀಂನಗರ ವುಮೆನ್​ ಸ್ನೇಕ್​ ಕ್ಯಾಚರ್​ ಶಬಾನಾ ಕತೆ, ಕರೀಂನಗರ ವುಮೆನ್​ ಸ್ನೇಕ್​ ಕ್ಯಾಚರ್​ ಸುದ್ದಿ,
ಕಗ್ಗತ್ತಿನಲ್ಲಿ ಸರಳವಾಗಿಯೇ ಹಾವು ಹಿಡಿಯುತ್ತಾಳೆ ಈ ಹಾವು‘ರಾಣಿ’
author img

By

Published : Jul 14, 2021, 12:45 PM IST

Updated : Jul 14, 2021, 1:06 PM IST

ಕರೀಂನಗರ(ತೆಲಂಗಾಣ): ಆಕೆಗೆ ಧೈರ್ಯ ಜಾಸ್ತಿ... ಏನಾದ್ರೂ ಸಾಹಸ ಮಾಡಬೇಕೆಂಬ ಹಂಬಲ.. ಹೀಗಾಗಿ ಅವಳು ಆಯ್ದುಕೊಂಡ ರಂಗವೇ ಬೇರೆ ಆಗಿತ್ತು. ಅದು ಸಹ ವಿಷವುಳ್ಳ ಹಾವು ಹಿಡಿಯುವ ಸಾಹಸ ಕಾರ್ಯ.

ಕರೀಂನಗರ ಜಿಲ್ಲೆಯ ನಿವಾಸಿ ಶಬಾನಾಗೆ ಹಾವು ಹಿಡಿಯುವುದು ಅಂದ್ರೆ ಒಂದು ಕ್ರೇಜ್​ ಇದ್ದಂತೆ. ಅಲ್ಲಿ ಹಾವು ಇದೇ ಅಂತಾ ಗೊತ್ತಾದರೆ ಸಾಕು ಮುನ್ನುಗ್ಗೇ ಬಿಡುತ್ತಾರೆ. ಮಂಗಳವಾರ ರಾತ್ರಿ ಜಿಲ್ಲೆಯ ಮಂಕಮ್ಮತೋಟದಲ್ಲಿ ವೆಂಕಟರಮಣ ಎಂಬುವರ ಮನೆಯಲ್ಲಿ ನಾಗರ ಹಾವು ಕಾಣಿಸಿದೆ. ಬಳಿಕ ಮತ್ತಿಬ್ಬರ ಮನೆಯಲ್ಲಿ ನುಗ್ಗಿದ ನಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಿತ್ತು. ವಿಷಯ ತಿಳಿದ ಕಾರ್ಪೊರೇಟರ್​ ಜಿತೇಂದ್ರ ಹಾವು ಹಿಡಿಯುವವರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದರು.

ಕೂಡಲೇ ಸ್ಪಂದಿಸಿದ ಶಬಾನಾ ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಆ ಮನೆಯ ಲೈಟ್​ಗಳನ್ನು ಬಂದ್​ ಮಾಡಿದರು. ಕಗ್ಗತ್ತಲಿನಲ್ಲಿ ಹಾವಿನ ಶಬ್ದವನ್ನು ಆಲಿಸಿದರು. ಬಳಿಕ ಕ್ಷಣಾರ್ಧದಲ್ಲೇ ಹಾವು ಹಿಡಿದರು. ಈ ಹಾವನ್ನು ಪ್ಲಾಸ್ಟಿಕ್​ ಬಾಟಲಿಯೊಳಗೆ ಹಾಕಿ, ಭಯಪಡುವ ಅವಶ್ಯಕತೆಯಿಲ್ಲ ಎಂದು ಅಲ್ಲಿನ ಜನಕ್ಕೆ ತಿಳಿಸಿದರು.

ಹಾವು ಹಿಡಿದು ಬಾಟಲಿಯೊಳಗೆ ಹಾಕಿದ ಮೇಲೆ ಜನ ನಿಟ್ಟುಸಿರು ಬಿಟ್ಟರು. ಇಲ್ಲಿಯವರೆಗೆ ಹಾವುಗಳನ್ನು ಹಿಡಿಯುವುದು ಪುರುಷರೇ ಎಂದುಕೊಂಡಿದ್ದ ಈ ಊರಿನ ಮಂದಿ ಶಬಾನಾ ಅವರ ಧೈರ್ಯ ಕಂಡು ಬೆರಗಾದರು. ಸುಲಭವಾಗಿ, ಧೈರ್ಯವಾಗಿ ಹಾವು ಹಿಡಿಯುವುದನ್ನು ಕಂಡ ಜನ ಶಬಾನಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Jul 14, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.