ETV Bharat / bharat

Kargil Vijay Diwas: 24ನೇ ಕಾರ್ಗಿಲ್​ ವಿಜಯ​ ದಿನ ಆಚರಣೆ: ದ್ರಾಸ್‌ನಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ - ಕಾರ್ಗಿಲ್ ವಿಜಯ್ ದಿವಸ್

Kargil Vijay Diwas 2023: 24ನೇ ಕಾರ್ಗಿಲ್​ ವಿಜಯ​ ದಿವಸ್​ ಆಚರಣೆಯ ಅಂಗವಾಗಿ ಇಂದು ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮರಾದ 527 ಭಾರತೀಯ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Kargil Vijay Diwas 2023
ಕಾರ್ಗಿಲ್​ ವಿಜಯ​ ದಿನ
author img

By

Published : Jul 26, 2023, 9:38 AM IST

Updated : Jul 26, 2023, 11:02 AM IST

ದ್ರಾಸ್‌ನಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ

ಲಡಾಖ್ : ಪ್ರತಿ ವರ್ಷ ದೇಶದಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಹಾಗು ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಭೇಟಿ ನೀಡಿ ಪುಷ್ಪ ನಮನ ಅರ್ಪಿಸಿದರು. ಈ ಮೂಲಕ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಕಾರ್ಗಿಲ್ ವಿಜಯ ದಿನದ ಮಹತ್ವ : ಭಾರತದಲ್ಲಿ ಪ್ರತಿ ವರ್ಷ ಜುಲೈ 26 ಅನ್ನು ಕಾರ್ಗಿಲ್‌ ವಿಜಯ್‌ ದಿವಸ್‌ ಎಂದು ಆಚರಿಸಲಾಗುತ್ತದೆ. ಈ ಮೂಲಕ ಯುದ್ಧದಲ್ಲಿ ಹೋರಾಡಿದ ಹಾಗೂ ಮಡಿದ ಸೈನಿಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿಜಯ ದಿನದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪೈಪ್ ಬ್ಯಾಂಡ್ ಮತ್ತು ಸ್ಟ್ಯಾಟಿಕ್ ಬ್ಯಾಂಡ್ ಪ್ರದರ್ಶನ ಮತ್ತು ಬೀಟಿಂಗ್ ರಿಟ್ರೀಟ್ ಮೂಲಕ ಹುತಾತ್ಮರಿಗೆ ದೀಪಗಳನ್ನು ಬೆಳಗಿಸುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಕೂಡ ನಡೆಯುತ್ತದೆ. ಅಷ್ಟೇ ಅಲ್ಲದೆ, ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಲಾಗುತ್ತದೆ. ಹಾಗಾಗಿ, ಭಾರತೀಯರು ಎಂದೂ ಮರೆಯಲಾಗದ ಅವಿಸ್ಮರಣೀಯ ದಿನಗಳಲ್ಲಿ ಇದು ಕೂಡ ಒಂದು.

  • #WATCH | Ladakh: Four MIG 29 aircraft fly past over the Kargil War Memorial in Drass on Kargil Vijay Diwas. Tributes are being paid to soldiers who lost their lives in the 1999 Kargil War. pic.twitter.com/YHdk9aLuXa

    — ANI (@ANI) July 26, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಗೌರವ : ದ್ರಾಸ್‌ನಲ್ಲಿ ಸ್ಮಾರಕಕ್ಕೆ ಪುಷ್ಪ ನಮನ

ಕಾರ್ಗಿಲ್‌ ಯುದ್ಧವು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. 1999ರಲ್ಲಿ ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್‌-ದ್ರಾಸ್‌ ವಲಯ ಪ್ರವೇಶಿಸಿ ಜಯ ಸಾಧಿಸಿದ್ದು, ಇಂದಿಗೆ 24 ವರ್ಷ ತುಂಬುತ್ತದೆ.

ಇದನ್ನೂ ಓದಿ : ಧಾರವಾಡದ ಕಾರ್ಗಿಲ್ ಸ್ತೂಪದಲ್ಲಿ ಸರಳ ಕಾರ್ಗಿಲ್ ವಿಜಯ ದಿನಾಚರಣೆ

1999ರ ಮೇ ತಿಂಗಳಿನಲ್ಲಿ ಆರಂಭವಾದ ಯುದ್ಧ ಜುಲೈ ಅಂತ್ಯದ ತನಕ ಸುಮಾರು 2 ತಿಂಗಳುಗಳ ಕಾಲ ನಡೆಯಿತು. ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್‌ ಸೇನೆಯನ್ನು ಭಾರತೀಯ ಸೇನೆ ಶೌರ್ಯದಿಂದ ಹಿಮ್ಮೆಟ್ಟಿತ್ತು. ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ : ಲಡಾಖ್​ನಲ್ಲಿ ಕಾರ್ಗಿಲ್​ ವಿಜಯ​ ದಿನ​ ಆಚರಣೆಗೆ ಸಿದ್ಧತೆ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿ

Last Updated : Jul 26, 2023, 11:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.