ETV Bharat / bharat

ಕಾನ್ಪುರದಲ್ಲಿ ಹೊಸದಾಗಿ 25 ಮಂದಿಗೆ ಝಿಕಾ: 36ಕ್ಕೆ ಏರಿದ ಒಟ್ಟು ಸೋಂಕಿತರು

ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಹಾವಳಿ ಮುಂದುವರೆದಿದ್ದು, ಕಾನ್ಪುರದಲ್ಲಿ ಗುರುವಾರ ಹೊಸದಾಗಿ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Kanpur reports 25 more cases of Zika virus, tally reaches 36
ಕಾನ್ಪುರದಲ್ಲಿ ಹೊಸದಾಗಿ 25 ಮಂದಿಗೆ ಝಿಕಾ
author img

By

Published : Nov 4, 2021, 10:13 PM IST

ಕಾನ್ಪುರ, ಉತ್ತರ ಪ್ರದೇಶ: ಝಿಕಾ ವೈರಸ್ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಹಾವಳಿ ಮುಂದುವರೆಸಿದೆ. ಕಾನ್ಪುರ ಜಿಲ್ಲಾ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಗುರುವಾರ ಹೊಸದಾಗಿ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ಈವರೆಗೆ ಝಿಕಾ ಸೋಂಕಿಗೆ ಒಳಗಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಇಬ್ಬರು ಗರ್ಭಿಣಿಯರೂ ಇದ್ದಾರೆ ಎಂದು ಕಾನ್ಪುರ ಜಿಲ್ಲಾ ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ 11 ಮಂದಿಯಲ್ಲಿ ಝಿಕಾ ಕಾಣಿಸಿಕೊಂಡಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್ಪುರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ನೇಪಾಲ್ ಸಿಂಗ್ ಆರೋಗ್ಯ ಇಲಾಖೆಯು 400ರಿಂದ 500 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮನೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿ ಸ್ಯಾಂಪಲ್​ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾನ್ಪುರ ನಗರದ ತಿವಾರಿಪುರ, ಅಶ್ರಫಾಬಾದ್, ಪೋಖರ್‌ಪುರ, ಶ್ಯಾಮ್ ನಗರ ಮತ್ತು ಆದರ್ಶ ನಗರ ಪ್ರದೇಶದಲ್ಲಿ ಝಿಕಾ ವೈರಸ್‌ನ ಹೊಸ ಪ್ರಕರಣಗಳು ವರದಿಯಾಗಿವೆ. ರೋಗದ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಅದರ ಮೂಲವನ್ನು ಪತ್ತೆಹಚ್ಚಲು, ಆ್ಯಂಟಿ-ಲಾರ್ವಾ ದ್ರಾವಣ ಸಿಂಪಡಣೆ, ರೋಗಿಗಳ ಗುರುತಿಸುವಿಕೆ, ಗರ್ಭಿಣಿಯರ ತಪಾಸಣೆ ಮತ್ತು ನೈಮರ್ಲ್ಯ ಕಾರ್ಯಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಝಿಕಾ ಎಂಬುದು ವೈರಸ್ ಆಗಿದ್ದು, ಝಿಕಾ ವೈರಸ್ ಸೋಂಕಿತ ಸೊಳ್ಳೆಯಿಂದ ಮನುಷ್ಯನಿಗೆ ಹರಡುತ್ತದೆ. ಅಕ್ಟೋಬರ್ 23ರಂದು ವಾಯುಪಡೆಯ ಸಿಬ್ಬಂದಿಯಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿತ್ತು. ಇದಾದ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಉನ್ನತ ಮಟ್ಟದ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶುಭಕೋರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.