ಕಾನ್ಪುರ(ಉತ್ತರಪ್ರದೇಶ): ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಇನ್ನೂ ತಣ್ಣಗಾಗಿಲ್ಲ. ಆದರೆ ಕೋಚ್ವೊಬ್ಬರ ವಿರುದ್ಧ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿರುವ ಆರೋಪವೊಂದು ಕೇಳಿ ಬಂದಿದೆ.
ಕಾನ್ಪುರದಲ್ಲಿ ಬಾಕ್ಸಿಂಗ್ ಕಲಿಯುತ್ತಿರುವ ಬಾಲಕಿಯೊಬ್ಬಳು ತನ್ನ ಕೋಚ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಾಕ್ಸರ್ ಟ್ರೈನಿ ಪೋಸ್ಟ್ ವೈರಲ್ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸಿದ್ದಾರೆ. ಸಂತ್ರಸ್ತೆಗೆ ಮನೆಗೆ ತೆರಳಿ ದೂರು ದಾಖಲಿಸುವಂತೆ ಸೂಚಿಸಿದ್ದು, ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಕಾನ್ಪುರದಲ್ಲಿ ಬಾಕ್ಸಿಂಗ್ ಕೋಚ್ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಕಿರುಕುಳ ಮತ್ತು ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಬಾಕ್ಸಿಂಗ್ ತರಬೇತಿ ವೇಳೆ ತರಬೇತುದಾರ ನನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ. ಇದನ್ನು ಪ್ರಶ್ನಿಸಿದಾಗ ನನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪರ್ಮಾಟ್ ನಿವಾಸಿಯಾಗಿರುವ 11ನೇ ತರಗತಿ ವಿದ್ಯಾರ್ಥಿನಿ ಬಾಕ್ಸಿಂಗ್ ಕಲಿಯಲು ಸುಮಾರು ಒಂದು ವರ್ಷದಿಂದ ಕಾನ್ಪುರದ ಸ್ವರೂಪ್ ಪಾರ್ಕ್‌ನಲ್ಲಿರುವ ದಿ ಸ್ಪೋರ್ಟ್ಸ್ ಹಬ್‌ಗೆ ಬರುತ್ತಿದ್ದರು. ದಿ ಸ್ಪೋರ್ಟ್ಸ್ ಹಬ್‌ನಲ್ಲಿ ಕೋಚ್ ಆಗಾಗೆ ಅಪ್ರಾಪ್ತ ಬಾಕ್ಸರ್ ಟ್ರೈನಿಗೆ ಕಿರುಕುಳ ನೀಡುತ್ತಿದ್ದರು. ವಿದ್ಯಾರ್ಥಿನಿ ಜೊತೆ ಕೋಚ್ ಗೌರವ್ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂಬ ಆರೋಪ ಅವರ ಮೇಲೆ ಕೇಳಿ ಬಂದಿದೆ.
ಬಾಕ್ಸಿಂಗ್ ಕಲಿಸುವ ನೆಪದಲ್ಲಿ ಕೋಚ್ ನನ್ನ ದೇಹವನ್ನು ತಪ್ಪಾಗಿ ಸ್ಪರ್ಶಿಸುತ್ತಿದ್ದ. ಈ ಬಗ್ಗೆ ಕೇಳಿದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಕೋಚ್ ಬೆದರಿಕೆ ಹಾಕಿದ್ದರು. ನನ್ನನ್ನು ದೈಹಿಕವಾಗಿ ಶೋಷಿಸುವ ಉದ್ದೇಶದಿಂದ ಕೋಚ್ ಗೌರವ್ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ದೂರಿನ ಮೂಲಕ ಆರೋಪಿಸಿದ್ದಾರೆ.
ಬಾಲಕಿಯ ದೂರಿನ ಆಧಾರದ ಮೇಲೆ ಗ್ವಾಲ್ಟೋಲಿ ಪೊಲೀಸರು ಕೋಚ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೋಚ್ ವಿರುದ್ಧ ದೂರು ದಾಖಲಾದ ಹಿನ್ನೆಲೆ ಗೌರವ್ ಅವರನ್ನು ತರಬೇತಿದಾರರ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಕೋಚ್ ಗೌರವ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಮೂರು ಸದಸ್ಯರ ತಂಡವನ್ನು ಕಾನ್ಪುರ ಬಾಕ್ಸಿಂಗ್ ಅಸೋಸಿಯೇಷನ್ ರಚಿಸಿದೆ.
ಕಾನ್ಪುರ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಗೋವಿಂದ್ ನಗರದ ಡಿಬಿಎಸ್ ಕಾಲೇಜಿನಲ್ಲಿ ಸಭೆ ನಡೆಯಿತು. ಸಭೆಯಲ್ಲಿ, ಕಾರ್ಯದರ್ಶಿ ಸಂಜೀವ್ ದೀಕ್ಷಿತ್ ಅವರು ಕೋಚ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ಸಮಗ್ರ ವರದಿಯನ್ನು ಸಲ್ಲಿಸುವ ತ್ರಿಸದಸ್ಯ ಸಮಿತಿಯನ್ನು ರಚಿಸಿ ಆದೇಶಿಸಿದರು.
ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತದ ಕೆಲವು ಪ್ರಮುಖ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪದ ನಡುವೆ ಈ ಘಟನೆ ನಡೆದಿರುವುದು ಗಮನಾರ್ಹ..
ಓದಿ: Wrestlers protest: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಇಂದು ಚಾರ್ಜ್ಶೀಟ್ ಸಲ್ಲಿಕೆ