ETV Bharat / bharat

ವಿವಾದಾತ್ಮಕ ಹೇಳಿಕೆ.. ಶಾಂತಿ ಸಮಿತಿ ಮುಂದೆ ಹಾಜರಾಗಲು ಇನ್ನಷ್ಟು ಗಡುವು ಕೇಳಿದ ನಟಿ ಕಂಗನಾ ರಾಣಾವತ್​

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಕಂಗಾನಾ ರಾಣಾವತ್​ಗೆ ದೆಹಲಿ ವಿಧಾನಸಭೆ ಶಾಂತಿ ಸಮಿತಿ ನೋಟಿಸ್​ ಜಾರಿ ಮಾಡಿ, ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಲು ಇಂದು ಗಡುವು ನೀಡಿತ್ತು. ಕಂಗನಾ ಸಮಿತಿ ಮುಂದೆ ಹಾಜರಾಗದೇ ಕಾಲಾವಕಾಶ ವಿಸ್ತರಿಸಲು ಕೋರಿದ್ಧಾರೆ..

author img

By

Published : Dec 6, 2021, 3:27 PM IST

Updated : Dec 6, 2021, 7:13 PM IST

kangana
ನಟಿ ಕಂಗನಾ ರಾಣಾವತ್​

ನವದೆಹಲಿ : ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಾಣಾವತ್​ ದೆಹಲಿ ವಿಧಾನಸಭೆ ಶಾಂತಿ ಸಮಿತಿ ಮುಂದೆ ಇಂದು ಹಾಜರಾಗದೇ, ಕಾಲಾವಕಾಶ ವಿಸ್ತರಿಸಲು ಕೋರಿದ್ದಾರೆ.

ನಟಿ ಕಂಗನಾ ಅವರು ಇತ್ತೀಚೆಗೆ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ಈ ಬಗ್ಗೆ ವಿಚಾರಣೆ ನಡೆಸಲು ದೆಹಲಿ ವಿಧಾನಸಭೆ ಶಾಂತಿ ಸಮಿತಿಗೆ ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ನಟಿ ಕಂಗನಾಗೆ ಶಾಂತಿ ಮತ್ತು ಸೌಹಾರ್ದತಾ ಸಮಿತಿ ನೋಟಿಸ್​ ಜಾರಿ ಮಾಡಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಡಿ.6ರಂದು ಗಡುವು ನೀಡಿತ್ತು.

ಇದನ್ನೂ ಓದಿ: ಇಂದು ಪಿಂಕ್​ ಸಿಟಿಗೆ ಬರುವ ವಿಕ್ಕಿ-ಕತ್ರಿನಾ ಜೋಡಿಗೆ ಭವ್ಯ ಸ್ವಾಗತ.. ನಾಳೆಯಿಂದ ವಿವಾಹ ಕಾರ್ಯಕ್ರಮಗಳು ಶುರು

ಆದರೆ, ನಟಿ ಕಂಗನಾ ರಾಣಾವತ್​ ವೈಯಕ್ತಿಕ ಕಾರಣದಿಂದಾಗಿ ಸಮಿತಿ ಮುಂದೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕಾಲಾವಕಾಶ ವಿಸ್ತರಿಸಬೇಕು ಎಂದು ಕೋರಿದ್ದಾರೆ. ಇದನ್ನು ಸಮಿತಿ ಮಾನ್ಯ ಮಾಡಲಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ರಾಘವ್ ಚಡ್ಡಾ ತಿಳಿಸಿದ್ದಾರೆ.

Last Updated : Dec 6, 2021, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.