ಹೈದರಾಬಾದ್ : ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಕಾಂಟ್ರವರ್ಸಿಯಲ್ ಕ್ವೀನ್(controversy queen) ಎಂಬ ಹಣೆಪಟ್ಟ ಕಟ್ಟಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಇದೀಗ ಮತ್ತೊಂದು ಅದೇ ರೀತಿಯ ಹೇಳಿಕೆ ನೀಡಿದ್ದಾರೆ.
ಕೃಷಿ ಕಾನೂನು(Repeal of farm laws) ವಾಪಸ್ ಪಡೆದುಕೊಂಡಿರುವ ನಿರ್ಧಾರ ದುಃಖಕರ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ನಿನ್ನೆಯಷ್ಟೇ ಹೇಳಿದ ನಟಿ ಕಂಗನಾ ರಣಾವತ್, ಇಂದು ಮತ್ತೊಂದು ಹೇಳಿಕೆ ನೀಡಿದ್ದು, ದೇಶಕ್ಕೆ ಇಂದಿರಾಗಾಂಧಿ(Indira Gandhi)ಯಂತಹ ಪ್ರಧಾನಿ ಅಗತ್ಯವಿದೆ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ, ಖಲಿಸ್ತಾನ ಉಗ್ರರು ತಮಗೆ ಬೇಕಾದ ರೀತಿಯಲ್ಲಿ ಸರ್ಕಾರದ ಕೈಗಳನ್ನ ತಿರುವಿದರೂ ಕೂಡ, ಓರ್ವ ಮಹಿಳೆಯನ್ನ ಎಂದಿಗೂ ಮರೆಯಬಾರದು. ನಮ್ಮ ದೇಶದ ಏಕೈಕ ಮಹಿಳಾ ಪ್ರಧಾನಿ ಅವರನ್ನ ತಮ್ಮ ಶೂ ಅಡಿ ತುಳಿದಿದ್ದರು.
ದೇಶ ಯಾವುದೇ ಕಾರಣಕ್ಕೂ ಇಬ್ಭಾಗವಾಗಲು ಬಿಡಲಿಲ್ಲ. ದೇಶಕ್ಕೆ ಎಷ್ಟೇ ಕಷ್ಟ ಬಂದರೂ, ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದರು. ಅವರ ಸಾವು ಸಂಭವಿಸಿ ದಶಕ ಕಳೆದರೂ ಕೂಡ ಹೆಸರು ಕೇಳಿ ಈಗಲೂ ನಡಗುತ್ತಾರೆ. ಸದ್ಯ ಇಂತವರು ಬೇಕು ಎಂದಿದ್ದಾರೆ.
ಇದನ್ನೂ ಓದಿರಿ: ಗೆಹ್ಲೋಟ್ ಸಂಪುಟದ ಎಲ್ಲ ಸಚಿವರು ರಾಜೀನಾಮೆ.. ನಾಳೆ, ನಾಡಿದ್ದು ಹೊಸ ಕ್ಯಾಬಿನೆಟ್ ಪುನಾರಚನೆ?
ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರನ್ನ ಹಾಡಿ ಹೊಗಳುವ ಅವಕಾಶ ಮಿಸ್ ಮಾಡಿಕೊಳ್ಳದ ನಟಿ ಕಂಗನಾ ರಣಾವತ್, ಇದೇ ಮೊದಲ ಸಲ ಕೃಷಿ ಕಾಯ್ದೆ ವಿಚಾರವಾಗಿ ಈ ರೀತಿಯಾಗಿ ಮಾತನಾಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ನಡೆ ಟೀಕಿಸಿ, ಭಾರತಕ್ಕೆ ಇಂದಿರಾ ಗಾಂಧಿ ಅವರಂತಹ ಪ್ರಧಾನಿ ಅಗತ್ಯವಿದೆ ಎಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ರೀತಿಯಾಗಿ ಮಾಹಿತಿ ಹಂಚಿಕೊಂಡಿರುವ ನಟಿ, ಖಲಿಸ್ತಾನಿದ ಭಯೋತ್ಪಾದಕರು ತಮಗೆ ಬೇಕಾದ ರೀತಿಯಲ್ಲಿ ಸರ್ಕಾರದ ಕೈಗಳನ್ನು ತಿರುವಿದರೂ ಕೂಡ ಅವರು ಓರ್ವ ಮಹಿಳೆಯನ್ನು ಎಂದಿಗೂ ಮರೆಯಬಾರದು. ನಮ್ಮ ದೇಶದ ಏಕೈಕ ಮಹಿಳಾ ಪ್ರಧಾನಿ ಅವರನ್ನು ತಮ್ಮ ಶೂ ಅಡಿಯಲ್ಲಿ ತುಳಿದಿದ್ದರು ಎಂದಿದ್ದಾರೆ.