ಲಖನೌ(ಉತ್ತರ ಪ್ರದೇಶ): ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಉತ್ತರ ಪ್ರದೇಶ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಮಾಹಿತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ನವನೀತ್ ಸೆಹಗಲ್ ಈ ಕುರಿತು ಟ್ವೀಟ್ ಮಾಡಿದ್ದು ' ಖ್ಯಾತ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶ ಸಿಎಂ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದರು. ಅವರಿಗೆ ಒಂದು ಜಿಲ್ಲೆ - ಒಂದು ಉತ್ಪನ್ನ ಯೋಜನೆಯ ಉತ್ಪನ್ನವನ್ನು ಸಿಎಂ ನೀಡಿದ್ದಾರೆ. ಕಂಗನಾ ಅವರು ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ' ಎಂದಿದ್ದಾರೆ.
ಎನಿದು ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆ?
ಈ ಯೋಜನೆ ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ 75 ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ವಿಶೇಷ ಉತ್ಪನ್ನಕ್ಕೆ ಸರ್ಕಾರದ ಬೆಂಬಲ ನೀಡಿ, ಉತ್ಪಾದನೆಯನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ.
-
Famous Actress Kangana Ranawat met @myogiadityanath Hon’ble Chief Minister UP, who presented her with an @UP_ODOP product. Kangna ji will be our Brand Ambassador for ODOP @CMOfficeUP pic.twitter.com/XUJTiStRqv
— Navneet Sehgal (@navneetsehgal3) October 1, 2021 " class="align-text-top noRightClick twitterSection" data="
">Famous Actress Kangana Ranawat met @myogiadityanath Hon’ble Chief Minister UP, who presented her with an @UP_ODOP product. Kangna ji will be our Brand Ambassador for ODOP @CMOfficeUP pic.twitter.com/XUJTiStRqv
— Navneet Sehgal (@navneetsehgal3) October 1, 2021Famous Actress Kangana Ranawat met @myogiadityanath Hon’ble Chief Minister UP, who presented her with an @UP_ODOP product. Kangna ji will be our Brand Ambassador for ODOP @CMOfficeUP pic.twitter.com/XUJTiStRqv
— Navneet Sehgal (@navneetsehgal3) October 1, 2021
ಮೂಲಗಳ ಪ್ರಕಾರ ಕಂಗನಾ ರಣಾವತ್ ಸಿಎಂ ಅವರನ್ನು ಭೇಟಿಯಾದ ನಂತರ, ಸಿಎಂ ಯೋಗಿ ಆದಿತ್ಯನಾಥ್ ಅವರ ಸಾಧನೆಗಳನ್ನ ಶ್ಲಾಘಿಸಿದ್ದಾರೆ. ಜೊತೆಗೆ ಕಂಗನಾ ಅವರಿಗೆ ರಾಮಮಂದಿರಕ್ಕೆ ಭೇಟಿ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಘಾಟ್ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ: ಮಹಾತ್ಮ ಗಾಂಧಿಗೆ ನಮನ.. ಗಣ್ಯರಿಂದ ರಾಷ್ಟ್ರಪಿತನ ಸ್ಮರಣೆ!