ನವದೆಹಲಿ : ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಎಲ್ಲರನ್ನೂ ಬಂಧಿಸಬೇಕು. ಪ್ರತಿಭಟನೆ ಸಂದರ್ಭದಲ್ಲಿ ಹಾನಿಗೊಳಗಾದ ಸರ್ಕಾರಿ ಆಸ್ತಿಪಾಸ್ತಿಯನ್ನು ಅವರಿಂದಲೇ ಭರಿಸಿಕೊಳ್ಳಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೆಂಪುಕೋಟೆಯಲ್ಲಿ ಕಂಡು ಬಂದ ದೃಶ್ಯ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಮತ್ತು ಈ ಪ್ರತಿಭಟನೆಗೆ ಹೆಚ್ಚು ಪ್ರೋತ್ಸಾಹ ನೀಡಿದವರನ್ನೂ ಜೈಲಿಗಟ್ಟಿ ಎಂದು ವಿಡಿಯೋ ಮೂಲಕ ಹೇಳಿರುವ ಕಂಗನಾ, ಪ್ರತಿಭಟನಾಕಾರರನ್ನು 'ಭಯೋತ್ಪಾದಕರು' ಎಂದು ಕರೆದಿದ್ದಾರೆ.
-
You need to explain this @diljitdosanjh @priyankachopra
— Kangana Ranaut (@KanganaTeam) January 26, 2021 " class="align-text-top noRightClick twitterSection" data="
Whole world is laughing at us today, yahi chahiye tha na tum logon ko!!!! Congratulations 👏 pic.twitter.com/ApHo5uMInO
">You need to explain this @diljitdosanjh @priyankachopra
— Kangana Ranaut (@KanganaTeam) January 26, 2021
Whole world is laughing at us today, yahi chahiye tha na tum logon ko!!!! Congratulations 👏 pic.twitter.com/ApHo5uMInOYou need to explain this @diljitdosanjh @priyankachopra
— Kangana Ranaut (@KanganaTeam) January 26, 2021
Whole world is laughing at us today, yahi chahiye tha na tum logon ko!!!! Congratulations 👏 pic.twitter.com/ApHo5uMInO
ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು, ಕೆಂಪುಕೋಟೆಯ ಮೇಲೆ ನಿಶಾನ್ ಸಾಹಿಬ್ ಧ್ವಜ ಹಾರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ವಿವರಿಸಿ ಎಂದು ನಟಿ ಪ್ರಿಯಾಂಕಾ ಚೋಪ್ರಾ, ನಟ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಬೆಳವಣಿಗೆಗನ್ನು ನೋಡಿ ಇಡೀ ವಿಶ್ವವೇ ನಗುವಂತಾಗಿದೆ. ಇದೆಲ್ಲಾ ನಿಮಗೆ ಬೇಕಿತ್ತೇ.. ದೇಶದ ಮರ್ಯಾದೆ ಕಳೆದಿರುವ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
-
The Tricolour CANNOT be disrespected.
— Gul Panag (@GulPanag) January 26, 2021 " class="align-text-top noRightClick twitterSection" data="
Absolutely unacceptable.
Must be condemned unequivocally.
">The Tricolour CANNOT be disrespected.
— Gul Panag (@GulPanag) January 26, 2021
Absolutely unacceptable.
Must be condemned unequivocally.The Tricolour CANNOT be disrespected.
— Gul Panag (@GulPanag) January 26, 2021
Absolutely unacceptable.
Must be condemned unequivocally.
ಈ ಟ್ಯಾಗ್ಗೆ ಪ್ರತಿಕ್ರಿಯಿಸಿದ ದೋಸಾಂಜ್ ಅವರು, ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿರುವುದು ಸ್ವೀಕಾರಾರ್ಹವಲ್ಲ. ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಶಾಂತಿಯುತ ಪ್ರತಿಭಟನೆಯನ್ನು ಮೊದಲ ದಿನದಿಂದ ಬೆಂಬಲಿಸಿದ್ದೇನೆ.
ಆದರೆ, ಈ ಹಿಂಸಾತ್ಮಕ ತಿರುವು ಖಂಡನೀಯ ಎಂದಿರುವ ಅವರು, ಈ ಪವಿತ್ರ ದಿನದಂದು (ಗಣರಾಜ್ಯೋತ್ಸವ ದಿನ) ತ್ರಿವರ್ಣ ಧ್ವಜ ಮಾತ್ರ ಕೆಂಪು ಕೋಟೆಯ ಮೇಲೆ ಹಾರಬೇಕು ಎಂದು ಉತ್ತರ ನೀಡಿದ್ದಾರೆ.
ರೈತರು ನಮ್ಮ ಸೈನಿಕರು. ಅವರ ಎಲ್ಲ ಭಯಗಳನ್ನು ಹೋಗಲಾಡಿಸುವುದು ಅಗತ್ಯ. ಅವರ ನಿರೀಕ್ಷೆಗಳನ್ನು ಈಡೇರಿಸಬೇಕು. ಪ್ರಜಾಪ್ರಭುತ್ವವಾಗಿ ಈ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಬೇಕಿದೆ ಎಂದು ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಈ ಹಿಂದೆ ಬೆಂಬಲ ಸೂಚಿಸಿದ್ದರು. ಹೀಗಾಗಿ, ಕಂಗನಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಣರಾಜ್ಯೋತ್ಸವ ಶುಭಾಶಯ ಮಾತ್ರ ಹಂಚಿಕೊಂಡಿದ್ದಾರೆ.