ETV Bharat / bharat

ರಜಿನಿ ಜತೆ ಮೈತ್ರಿಗೆ ಕೇವಲ ಒಂದು ಕರೆಯ ಅಂತರವಿದೆ; ಕಮಲ್‌ ಹಾಸನ್ - ರಜನಿಕಾಂತ್

'ನಮ್ಮ ಸಿದ್ಧಾಂತವು ಹೋಲುತ್ತಿದ್ದರೆ ಮತ್ತು ಅದು ಜನರಿಗೆ ಪ್ರಯೋಜನವಾಗಿದ್ದರೆ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧರಿದ್ದೇವೆ, ಇದಕ್ಕಾಗಿ ಕೇವಲ ನಮಗೆ ಒಂದು ಪೋನ್ ಕರೆ ಸಾಕು' ಎಂದು ನಟ ಕಮಲ್‌ ಹಾಸನ್‌, ರಜನಿಕಾಂತ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

We are just a phone call away, MNM Leader Kamal Hassan on political tie up with Rajinikanth
ರಜನಿಕಾಂತ್‌ ಪಕ್ಷದೊಂದಿಗೆ ಮೈತ್ರಿಗೆ ಕೇವಲ ಒಂದು ಕರೆಯ ಅಂತರದಲ್ಲಿದೆ; ಕಮಲ್‌ ಹಾಸನ್
author img

By

Published : Dec 15, 2020, 11:01 PM IST

ಟುಟಿಕಾರಿನ್‌ (ಮಧುರೈ): ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಕಟ್ಟುತ್ತಿರುವ ನೂತನ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದಿರುವ ಮಕ್ಕಲ್ ನಿಧಿ ಮಯಂ ಮುಖ್ಯಸ್ಥ ಕಮಲ್ ಹಾಸನ್, ರಜನಿ ಜೊತೆ ಕೈ ಜೋಡಿಸುವುದು ಕೇವಲ ಒಂದು ಕರೆ ಅಂತರದಲ್ಲಿದೆ ಎಂದು ಹೇಳಿದ್ದಾರೆ.

'ನಮ್ಮ ಸಿದ್ಧಾಂತವು ಹೋಲುತ್ತಿದ್ದರೆ ಮತ್ತು ಅದು ಜನರಿಗೆ ಪ್ರಯೋಜನವಾಗಿದ್ದರೆ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧರಿದ್ದೇವೆ, ಇದಕ್ಕಾಗಿ ಕೇವಲ ನಮಗೆ ಒಂದು ಪೋನ್ ಕರೆ ಸಾಕು' ಎಂದು ರಜನಿಕಾಂತ್ ಅವರೊಂದಿಗೆ ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಕಮಲ್‌ ಪ್ರತಿಕ್ರಿಯಿಸಿದ್ದಾರೆ.

ಎಂಎನ್‌ಎಂ ಪಕ್ಷದ ಮುಖ್ಯಸ್ಥರಾಗಿರುವ ಕಮಲ್‌ ಹಾಸನ್‌ ಇಂದು ಮಧುರೈ ಟುಟಿಕಾರಿನ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರ ಆರಂಭಿಸಿದ್ದರು. ಇದಕ್ಕೂ ಮುನ್ನ ಜಿಲ್ಲಾಡಳಿತ ಪ್ರಚಾರಕ್ಕೆ ಅನುಮತಿ ನಿರಾಕರಿಸಿತ್ತು.

ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನಲ್ಲಿ ರಾಜಕೀಯ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹಾಸನ್ ಈ ಹಿಂದೆ ಸುಳಿವು ನೀಡಿದ್ದರು, ಆದರೆ ಶೀಘ್ರದಲ್ಲೇ ತಮ್ಮ ಪಕ್ಷವನ್ನು ಘೋಷಿಸಲು ಸಜ್ಜಾಗಿರುವ ನಟ ರಜನಿಕಾಂತ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂಗತಿಯನ್ನು ಅವರು ತಳ್ಳಿಹಾಕಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.