ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ನಂಬಿಕೆಗಳೇ ಹಾಗೆ.. ನಂಬಿಕೆಗಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲನು. ಆಲಿವ್ ಮರ ಬೆಳೆಸಿದರೆ ಒಳ್ಳೆಯದಾಗುತ್ತದೆ ಎಂದು ನಂಬಿರುವ ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಈಗ ಎರಡು ಆಲಿವ್ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ನೆಡಲಿದ್ದಾರೆ.
ಹೌದು, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕದಿಯಂ ಪ್ರದೇಶದಿಂದ ಮರಗಳನ್ನು ಟ್ರಾಲಿ ಮೂಲಕ ಸಾಗಿಸಲಾಗಿದ್ದು, ಅವುಗಳನ್ನು ಗುಜರಾತ್ನ ಜಾಮ್ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಮನೆಯ ಮುಂದೆ ನೆಡಲಾಗುತ್ತದೆ.
ಆಲಿವ್ ಮರಗಳನ್ನು ಸ್ಪೇನ್ನಿಂದ ತಂದು ಪೂರ್ವ ಗೋದಾವರಿ ಜಿಲ್ಲೆಯ ಕದಿಯಂ ಪ್ರದೇಶದಲ್ಲಿರುವ ಗೌತಮಿ ನರ್ಸರಿಯಲ್ಲಿ ಬೆಳೆಸಲಾಗಿತ್ತು. ಎರಡು ಆಲಿವ್ ಮರಗಳ ಬೆಲೆ 22 ಲಕ್ಷ ರೂಪಾಯಿ ಆಗಿದ್ದು, ಅವುಗಳನ್ನು ಸಾಗಿಸಲು ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಗೌತಮಿ ನರ್ಸರಿಯ ಮುಖ್ಯಸ್ಥ ಮಾರ್ಗನಿ ವೀರಬಾಬು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮಳೆಯಾರ್ಭಟ: ರಾಜ್ಯಪಾಲರನ್ನು ಭೇಟಿಯಾಗಲಿರುವ ಸಿಎಂ ಸ್ಟಾಲಿನ್