ತಿರುಪತಿ, ಆಂಧ್ರಪ್ರದೇಶ: ತಿರುಮಲವಾಸನ ದರ್ಶನಕ್ಕೆ ಜೂನ್ ತಿಂಗಳಿಂದ ದಿನಕ್ಕೆ ಕೇವಲ 5 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ನಿರ್ಧರಿಸಿದ್ದು, ಆನ್ಲೈನ್ ಮೂಲಕ ಬುಕ್ ಮಾಡುವ ಪ್ರಕ್ರಿಯೆ ಇಂದಿನಿಂದ ಆರಂಭಿಸಿದೆ.
ಟಿಟಿಡಿಯ ಅಧಿಕೃತ ವೆಬ್ಸೈಟ್ನಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಮುಂಗಡವಾಗಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಕಾರಣದಿಂದ ತಿರುಮಲಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!
ಮೇ ತಿಂಗಳವರೆಗೆ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಟಿಕೆಟ್ ಬುಕ್ ಮಾಡಿಸಿಯೂ, ದರ್ಶನಕ್ಕೆ ಬಾರಲು ಆಗದಿದ್ದವರು ಈ ವರ್ಷದೊಳಗೆ ಯಾವುದೇ ದಿನದಲ್ಲಾದರೂ ತಿರುಪತಿ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿರುವುದಾಗಿ ಟಿಟಿಡಿ ಇತ್ತೀಚೆಗೆ ಘೋಷಿಸಿತ್ತು.