ನವದೆಹಲಿ: ಆಂಟಿವೈರಲ್ ಔಷಧ ರೆಮ್ಡಿಸಿವಿರ್ನ ಚುಚ್ಚುಮದ್ದಿನ ಸೂತ್ರೀಕರಣ ಬಳಸಿಕೊಂಡು ರೆಮ್ಡಿಸಿವಿರ್ನ ಮೌಖಿಕ (ಓರಲ್) ಔಷಧಿಯ ಸೂತ್ರೀಕರಣವನ್ನು ಕೋವಿಡ್-19 ಚಿಕಿತ್ಸೆಗೆ ಬಳಸಲು ಅಧ್ಯಯನ ನಡೆಸಲಾಗಿದೆ.
ಜುಬಿಲೆಂಟ್ ಫಾರ್ಮಾ ಯಶಸ್ವಿಯಾಗಿ ಈ ಅಧ್ಯಯನಗಳನ್ನು ಪೂರ್ಣಗೊಳಿಸಿದೆ ಎಂದು ಜುಬಿಲಂಟ್ ಫಾರ್ಮೋವಾ ತಿಳಿಸಿದೆ.
"ಜುಬಿಲಂಟ್ ಫಾರ್ಮಾವು ರೆಮ್ಡಿಸಿವಿರ್ನ ಚುಚ್ಚುಮದ್ದಿನ ಸೂತ್ರೀಕರಣದಂತೆ, ರೆಮ್ಡಿಸಿವಿರ್ನ ಹೊಸ ಓರಲ್ ಸೂತ್ರೀಕರಣವನ್ನು ಬಳಸಿಕೊಂಡು ಭಾರತದಲ್ಲಿ ಪ್ರಾಣಿಗಳು ಮತ್ತು ಆರೋಗ್ಯವಂತ ಸ್ವಯಂಸೇವಕರ ಮೇಲೆ ಈ ಅಧ್ಯಯನವನ್ನು ಯಶಸ್ವಿಯಾಗಿ ಹಾಗೂ ಸುರಕ್ಷಿತವಅಗಿ ಪೂರೈಸಿದೆ" ಎಂದು ಜುಬಿಲಂಟ್ ಫಾರ್ಮೋವಾ ಬಿಎಸ್ಇಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಈ ಓರಲ್ ಸೂತ್ರೀಕರಣಕ್ಕಾಗಿ ಜುಬಿಲೆಂಟ್ ಹೆಚ್ಚುವರಿ ಅಧ್ಯಯನಗಳಿಗೆ ಅನುಮತಿ ಕೋರಿದೆ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಹೇಳಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಯುಎಸ್ಎಫ್ಡಿಎ ಸಂಪೂರ್ಣವಾಗಿ ಅನುಮೋದಿಸಿದ ಮೊದಲ ಮತ್ತು ಏಕೈಕ ಆಂಟಿ-ವೈರಲ್ ಔಷಧಿ ರೆಮ್ಡಿಸಿವಿರ್ ಆಗಿದೆ.