ETV Bharat / bharat

ಜಮೀನು ವಿವಾದ: ಪತ್ರಕರ್ತ ದಂಪತಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! - ಸೋನ್​ಭದ್ರ ಪತ್ರಕರ್ತ ಸಾವು ಸುದ್ದಿ

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ದಂಪತಿ ಹೊಡೆದು ಸಾಯಿಸಿರುವ ಘಟನೆ ಉತ್ತರಪ್ರದೇಶದ ಸೋನ್​ಭದ್ರ ಜಿಲ್ಲೆಯಲ್ಲಿ ನಡೆದಿದೆ.

Journalist and wife beaten, Journalist and wife beaten to death, Journalist and wife beaten to death in Sonbhadra, Sonbhadra crime news, Sonbhadra journalist death, Sonbhadra journalist death news, ಪತ್ರಕರ್ತ ಮತ್ತು ಪತ್ನಿ ಮೇಲೆ ಹಲ್ಲೆ, ಪತ್ರಕರ್ತ ಮತ್ತು ಪತ್ನಿ ಹಲ್ಲೆ ನಡೆಸಿದಕ್ಕೆ ಸಾವು, ಸೋನ್​ಭದ್ರದಲ್ಲಿ ಪತ್ರಕರ್ತ ಮತ್ತು ಪತ್ನಿ ಸಾವು, ಸೋನ್​ಭದ್ರ ಅಪರಾಧ ಸುದ್ದಿ, ಸೋನ್​ಭದ್ರ ಪತ್ರಕರ್ತ ಸಾವು, ಸೋನ್​ಭದ್ರ ಪತ್ರಕರ್ತ ಸಾವು ಸುದ್ದಿ,
ಪತ್ರಕರ್ತ ದಂಪತಿಯನ್ನು ಹೊಡೆದು ಸಾಯಿಸಿದ ದುಷ್ಕರ್ಮಿಗಳು
author img

By

Published : Nov 19, 2020, 1:23 PM IST

ಲಖನೌ( ಉತ್ತರಪ್ರದೇಶ): ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ದಂಪತಿ ಮೇಲೆ ಕಬ್ಬಿಣದ ರಾಡ್​ಗಳು ಮತ್ತು ಕಟ್ಟಿಗೆ ಮೂಲಕ ಹಲ್ಲೆ ಮಾಡಿ ಸಾಯಿಸಿರುವ ಘಟನೆ ಕೊನೆ ಗ್ರಾಮದಲ್ಲಿ ನಡೆದಿದೆ.

ಜೀವ ಬೆದರಿಕೆ ಹಾಕಿದ ನಂತರ ಪತ್ರಕರ್ತ ಮತ್ತು ಅವರ ಪತ್ನಿ ಪೊಲೀಸರ ಬಳಿಗೆ ಹಿಂದಿರುಗುವಾಗ ಹಲ್ಲೆ ನಡೆಸಿದರು. ಪತ್ರಕರ್ತ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರ ಪತ್ನಿ ಆಸ್ಪತ್ರೆಯಲ್ಲಿ ನಿಧನರಾದರು. ದಂಪತಿಯ ದೂರಿನ ಮೇರೆಗೆ ಅಧಿಕಾರಿಗಳು ಪೊಲೀಸರಿಗೆ ಗುಂಡು ಹಾರಿಸಿದ್ದಾರೆ. ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಕೋನ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಿಂದಿ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುವ ಉದಯ್ ಪಾಸ್ವಾನ್ ಮತ್ತು ಗ್ರಾಮದ ಮುಖ್ಯಸ್ಥರ ಮಧ್ಯೆ ಭೂ ವಿವಾದದ ಸಂಬಂಧ ಜಗಳ ನಡೆಯುತ್ತಲೇ ಇತ್ತು. ಈ ಹಿಂದೆ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಬಳಿಕ ಸಂಜೆ ಮನೆಗೆ ಬೈಕ್​ನಲ್ಲಿ ಹಿಂದಿರುಗುವಾಗ ದಂಪತಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಕಬ್ಬಿಣದ ರಾಡ್​ಗಳು ಮತ್ತು ಕಟ್ಟಿಗೆಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ದಾಳಿಯಲ್ಲಿ ಉದಯ್ ಪಾಸ್ವಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅವರ ಪತ್ನಿ ಶೀತಲ್​ನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಶೀತಲ್​ ಮೃತಪಟ್ಟರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೃತರ ಪುತ್ರ ವಿನಯ್ ಪಾಸ್ವಾನ್ ದೂರಿನ ಪ್ರಕಾರ, ಗ್ರಾಮದ ಮುಖ್ಯಸ್ಥ ಪಾಸ್ವಾನ್, ಅವರ ಪತ್ನಿ ಕೌಸಲ್ಯ, ಪುತ್ರರಾದ ಜಿತೇಂದ್ರ, ಗಬ್ಬರ್ ಮತ್ತು ಶ್ರೀಕಾಂತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ವತಃ ಕೃಷಿಕರಾಗಿರುವ ನಮ್ಮ ತಂದೆ ಉದಯ್​ಗೆ ಮತ್ತು ಅವರಿಗೆ ಜಗಳಗಳು ನಡೆಯುತ್ತಲೇ ಇದ್ದವು. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ವಿರುದ್ಧ 2016 ಮತ್ತು 2018 ರಲ್ಲಿ ಪ್ರಕರಣಗಳಿವೆ ಎಂದು ಅವರು ಹೇಳಿದರು.

ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಮ್ಮ ತಂದೆ ಲಖನೌದಲ್ಲಿ ಮುಖ್ಯಮಂತ್ರಿಯ ಜನತಾ ದರ್ಬಾರ್‌ಗೆ ದೂರು ನೀಡಿದ್ದರು. ಆದರೆ, ಸೋನ್‌ಭದ್ರ ಪೊಲೀಸರು ಮುಖ್ಯಮಂತ್ರಿ ಕಚೇರಿಯ ಆದೇಶಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ವಿನಯ್​ ಹೇಳಿದರು.

ಘಟನೆಗೆ ಪ್ರತಿಕ್ರಿಯಿಸಿದ ಅಧೀಕ್ಷಕ ಆಶಿಶ್ ಶ್ರೀವಾಸ್ತವ, ಪತ್ರಕರ್ತ ದಂಪತಿ ದೂರಿನ ಮೇರೆಗೆ ನಿರ್ಲಕ್ಷ್ಯಕ್ಕಾಗಿ ಕೋನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಗ್ರಾಮದ ಮುಖ್ಯಸ್ಥನಿಗಾಗಿ ಶೋಧ ನಡೆಯುತ್ತಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.