ETV Bharat / bharat

'ಡಿಯರ್ ಪಿಎಂ': 8 ಅಂಶಗಳನ್ನಿಟ್ಟುಕೊಂಡು ಮೋದಿಗೆ ಪ್ರಮುಖ ಪ್ರತಿಪಕ್ಷಗಳಿಂದ ಪತ್ರ

ಉಚಿತ ಕೋವಿಡ್ ಲಸಿಕೆ ಸೇರಿದಂತೆ ಪ್ರಮುಖ 8 ಅಂಶಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಪಕ್ಷಗಳು ಪತ್ರ ಬರೆದಿವೆ.

pm modi
pm modi
author img

By

Published : May 12, 2021, 7:37 PM IST

Updated : May 12, 2021, 7:44 PM IST

ನವದೆಹಲಿ: ಡೆಡ್ಲಿ ವೈರಸ್ ಕೊರೊನಾ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿದಿನ ಸಾವಿರಾರು ಸೋಂಕಿತರು ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ದೇಶದ ಪ್ರಮುಖ 12 ಪ್ರತಿಪಕ್ಷಗಳು ಪ್ರಧಾನಿ ಮೋದಿಗೆ ಕೆಲವೊಂದು ಅಂಶಗಳನ್ನಿಟ್ಟುಕೊಂಡು ಪತ್ರ ಬರೆದಿವೆ.

ದೇಶದ ನಾಗರಿಕರಿಗೆ ಉಚಿತ ಕೋವಿಡ್​ ಲಸಿಕೆ ಸೇರಿದಂತೆ ಪ್ರಮುಖ 8 ವಿಷಯಗಳೊಂದಿಗೆ ಈ ಪತ್ರ ಬರೆದಿವೆ.

ವಿಪಕ್ಷಗಳು ಪತ್ರದಲ್ಲಿ ತಿಳಿಸಿರುವ 8 ಅಂಶಗಳು

  • ಜಾಗತಿಕ ಹಾಗೂ ದೇಶೀಯವಾಗಿ ಲಭ್ಯವಿರುವ ಎಲ್ಲ ಮೂಲಗಳಿಂದ ಲಸಿಕೆ ಖರೀದಿ
  • ತಕ್ಷಣವೇ ಉಚಿತ,ಸಾರ್ವತ್ರಿಕ ವ್ಯಾಕ್ಸಿನೇಷನ್​ ಅಭಿಯಾನ
  • ದೇಶೀಯ ಲಸಿಕೆ ಉತ್ಪಾದನೆ ವಿಸ್ತರಣೆ ಮಾಡಲು ಕಡ್ಡಾಯ ಪರವಾನಗಿ
  • ಕೋವಿಡ್ ಲಸಿಕೆಗೋಸ್ಕರ ಬಜೆಟ್​ನ 35,000 ಕೋಟಿ ರೂ. ಹಂಚಿಕೆ
  • ಸೆಂಟ್ರಲ್​ ವಿಸ್ಟಾ ನಿರ್ಮಾಣ ಕಾರ್ಯ ನಲ್ಲಿಸುವುದು, ಅದರ ಹಣ ಆಕ್ಸಿಜನ್​, ಲಸಿಕೆಗೆ ಬಳಕೆ
  • ಲೆಕ್ಕವಿಲ್ಲದ ಖಾಸಗಿ ಟ್ರಸ್ಟ್​ ಫಂಡ್​ನಲ್ಲಿರುವ ಎಲ್ಲ ಹಣ ರಿಲೀಸ್​ ಮಾಡಿ ಕೋವಿಡ್​ ಲಸಿಕೆ, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣ ಖರೀದಿ
  • ನಿರುದ್ಯೋಗಿಗಳಿಗೆ ತಿಂಗಳಿಗೆ 6 ಸಾವಿರ ಪ್ರೋತ್ಸಾಹ ಧನ
    Opposition letter to PM Modi
    ಪ್ರಧಾನಿಗೆ ಪತ್ರ ಬರೆದ ಪ್ರತಿಪಕ್ಷಗಳು
  • ಅಗತ್ಯ ಇರುವವರಿಗೆ ಉಚಿತ ಆಹಾರ ಧಾನ್ಯ ವಿತರಣೆ
  • ಕೋವಿಡ್​ಗೆ ಬಲಿಯಾಗುವ ರೈತರನ್ನ ರಕ್ಷಿಸಲು ಕೃಷಿ ಕಾನೂನು ರದ್ಧುಪಡಿಸುವುದು

ಇದನ್ನೂ ಓದಿ: ಸುಪ್ರೀಂಕೋರ್ಟ್​​ ನ್ಯಾಯಮೂರ್ತಿ​​ ಚಂದ್ರಚೂಡ್​ಗೂ ಕೊರೊನಾ ಸೋಂಕು

ಪ್ರಮುಖವಾಗಿ ಕಾಂಗ್ರೆಸ್​, ಜೆಡಿಎಸ್​, ಎನ್​ಸಿಪಿ, ಶಿವಸೇನೆ, ಟಿಎಂಸಿ, ಡಿಎಂಕೆ,ಜೆಎಂಎಂ, ಜೆಕೆಪಿಎ(ಫಾರುಖ್​​ ಅಬ್ದುಲ್ಲಾ), ಸಮಾಜವಾದಿ ಪಕ್ಷ, ಆರ್​ಜೆಡಿ, ಸಿಪಿಐ ಹಾಗೂ ಸಿಪಿಐ-ಎಂ ಪಕ್ಷ ಪತ್ರ ಬರೆದಿವೆ.

ಈ ಹಿಂದೆ ಕೂಡ ಕಾಂಗ್ರೆಸ್ ಅನೇಕ ಸಲ ಇದೇ ವಿಚಾರವನ್ನಿಟ್ಟುಕೊಂಡು ಪ್ರಧಾನಿ ಮೋದಿಗೆ ಪತ್ರ ಬರೆದಿತ್ತು. ಇದಾದ ಬಳಿಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್​ನ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

Last Updated : May 12, 2021, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.