ETV Bharat / bharat

ಭಾರತದ ಒಂದೇ ಡೋಸ್​ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಮನವಿ ಸಲ್ಲಿಸಿದ Johnson & Johnson

author img

By

Published : Aug 6, 2021, 3:29 PM IST

ದೇಶದಲ್ಲಿ ಸತತ ಮೂರು ದಿನಗಳಿಂದ ಹೊಸ ಕೋವಿಡ್​ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 44,643 ಕೇಸ್​ಗಳು ಹಾಗೂ 464 ಸಾವು ವರದಿಯಾಗಿವೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,18,56,757ಕ್ಕೆ ಹಾಗೂ ಮೃತರ ಸಂಖ್ಯೆ 4,26,754ಕ್ಕೆ ಏರಿಕೆಯಾಗಿದೆ..

Johnson & Johnson
Johnson & Johnson

ನವದೆಹಲಿ : ಅಮೆರಿಕ ಮೂಲದ ಜಾಗತಿಕ ಔಷಧ ಕಂಪನಿ ಜಾನ್ಸನ್ & ಜಾನ್ಸನ್ ಭಾರತದಲ್ಲಿ ಸಿಂಗಲ್​-ಡೋಸ್​ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.

ನಮ್ಮ ಸಿಂಗಲ್​-ಡೋಸ್​ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ನಾವು ಬದ್ಧವಾಗಿದ್ದೇವೆ ಹಾಗೂ ಭಾರತ ಸರ್ಕಾರದೊಂದಿಗೆ ನಡೆಯುತ್ತಿರುವ ಚರ್ಚೆಗಳನ್ನು ಎದುರು ನೋಡುತ್ತಿದ್ದೇವೆ.

ಇದಕ್ಕಾಗಿ ನಾವು ಆಗಸ್ಟ್ 5ರಂದು ಅಂದರೆ ನಿನ್ನೆ ತುರ್ತು ಬಳಕೆಗೆ ಅನುಮೋದನೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ಜಾನ್ಸನ್ & ಜಾನ್ಸನ್​ನ ಭಾರತದ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಪೂರೈಕೆ ಹೆಚ್ಚಿಸದಿದ್ದರೆ ಕೋವಿಡ್ ಪರಿಸ್ಥಿತಿ ಭೀಕರವಾಗಬಹುದು: ಮೋದಿಗೆ ಪತ್ರ ಬರೆದ ಮಮತಾ

ದೇಶದಲ್ಲಿ ಕೊರೊನಾ ವೈರಸ್​ ಮೂರನೇ ಅಲೆ ಮುಂಬರಲಿದೆ ಎಂದು ಈಗಾಗಲೇ ತಜ್ಞರು ಮಾಹಿತಿ ನೀಡಿದ್ದು, ಭಾರತ ತನ್ನ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ತಮ್ಮ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿ ಶೇ.85ರಷ್ಟು ಪರಿಣಾಮಕಾರಿ ಅನ್ನೋದನ್ನ ತೋರಿಸಿದೆ ಎಂದು ಜಾನ್ಸನ್ & ಜಾನ್ಸನ್ ಹೇಳಿಕೊಂಡಿದೆ. ಈ ವ್ಯಾಕ್ಸಿನ್​ಗೆ ಭಾರತ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಸತತ ಮೂರು ದಿನಗಳಿಂದ ಹೊಸ ಕೋವಿಡ್​ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 44,643 ಕೇಸ್​ಗಳು ಹಾಗೂ 464 ಸಾವು ವರದಿಯಾಗಿವೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,18,56,757ಕ್ಕೆ ಹಾಗೂ ಮೃತರ ಸಂಖ್ಯೆ 4,26,754ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.