ETV Bharat / bharat

ಜೋಧ್​ಪುರ ಸಿಲಿಂಡರ್​ ಸ್ಫೋಟ ಪ್ರಕರಣ; 17 ಲಕ್ಷ ರೂ ಪರಿಹಾರ ನೀಡಿದ ರಾಜಸ್ಥಾನ ಸರ್ಕಾರ

ಘಟನೆ ಸಂಬಂಧ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಅದರ ಅನುಸಾರ ಪರಿಹಾರ ನೀಡುವಂತೆ ಮಹಾತ್ಮ ಗಾಂಧಿ ಶವಾಗಾರದ ಮುಂದೆ ಮೃತದೇಹ ಪಡೆಯದೆ ಕುಟುಂಬಸ್ಥರು ಸದಸ್ಯರು ಸರ್ಕಾರ ವಿರುದ್ಧ ಪ್ರತಿಭಟಿಸಿದ್ದರು.

ಜೋಧ್​ಪುರ ಸಿಲಿಂಡರ್​ ಸ್ಪೋಟ ಪ್ರಕರಣ; 17 ಲಕ್ಷ ಪರಿಹಾರ ನೀಡಿದ ರಾಜಸ್ಥಾನ ಸರ್ಕಾರ
jodhpur-cylinder-blast-case-17-lakh-compensation-given-by-rajasthan-government
author img

By

Published : Dec 19, 2022, 6:13 PM IST

ಜೋಧ್​ಪುರ (ರಾಜಸ್ಥಾನ​): ಇಲ್ಲಿ ನಡೆದ ಸಿಲಿಂಡರ್​ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕಡೆಗೂ ಪ್ರತಿಭಟನಾಕಾರರು ಮತ್ತು ಸರ್ಕಾರ ಒಂದು ನಿರ್ಣಯಕ್ಕೆ ಬರುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಮೊದಲು ಸಂತ್ರಸ್ತರಿಗೆ 50 ಲಕ್ಷ ಪರಿಹಾರದ ಪ್ಯಾಕೇಜ್​ ನೀಡುವಂತೆ ಸಂತ್ರಸ್ತರ ಕುಟುಂಬ ಬೇಡಿಕೆ ಇಟ್ಟಿತ್ತು. ಇದರಿಂದಾಗಿ ರಾಜಸ್ಥಾನ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.

ಇದೀಗ ಸಂತ್ರಸ್ತರು 17 ಲಕ್ಷದ ಪರಿಹಾರ ಪ್ಯಾಕೇಜ್​ಗೆ ಒಪ್ಪಿಗೆ ಸೂಚಿಸಿದ್ದಾರೆ. ಏತನ್ಮಧ್ಯೆ ಸಿಲಿಂಡರ್​ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿದೆ. ಭುಂಗ್ರಾ ಗ್ರಾಮದಲ್ಲಿ ಸಂಭವಿಸಿದ ಮದುವೆ ಸಮಾರಂಭದಲ್ಲಿ ಈ ಅನಾಹುತ ಸಂಭವಿಸಿತ್ತು. ಘಟನೆ ಸಂಬಂಧ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಅದರ ಅನುಸಾರ ಪರಿಹಾರ ನೀಡುವಂತೆ ಮಹಾತ್ಮ ಗಾಂಧಿ ಶವಾಗಾರದ ಮುಂದೆ ಮೃತದೇಹ ಪಡೆಯದೆ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಮಾತನಾಡಿರುವ ಜೋಧ್ಪುರ್​ ವಲಯ ಆಯುಕ್ತ ಕೈಲಾಶ್​ ಚಂದ್​ ಮೀನಾ, ಪ್ರಧಾನಿ ಕಚೇರಿ, ಸಿಎಂ ಪರಿಹಾರ ನಿಧಿಯಿಂದ ಒಟ್ಟು 17 ಲಕ್ಷ ರೂ ನೀಡಲಾಗಿದೆ. ಗ್ಯಾಸ್​ ಏಜೆನ್ಸಿ, ಚಿರಂಜೀವಿ ಯೋಜನೆ ಮತ್ತಿತರೆಯಿಂದ ವಿಮೆ ಭರ್ತಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನಾ ನಿರತರು ಆಸ್ಪತ್ರೆ ಶವಾಗಾರದಿಂದ ಮೃತ ದೇಹವನ್ನು ಕೊಂಡೊಯ್ದರು.

ಇದನ್ನೂ ಓದಿ: ಜೋಧ್​ಪುರ ಸಿಲಿಂಡರ್​ ಸ್ಫೋಟ: 18 ಕ್ಕೇರಿದ ಸಾವಿನ ಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.