ETV Bharat / bharat

ಜೋಧ್​ಪುರ ಸಿಲಿಂಡರ್​ ಸ್ಫೋಟ: 18 ಕ್ಕೇರಿದ ಸಾವಿನ ಸಂಖ್ಯೆ - ರಾಜಸ್ಥಾನದಲ್ಲಿ ಸಿಲಿಂಡರ್​ ಸ್ಫೋಟ

ಎರಡು ದಿನಗಳ ಹಿಂದೆ ರಾಜಸ್ಥಾನದಲ್ಲಿ ಸಂಭವಿಸಿದ್ದ ಮದುವೆ ಮನೆಯಲ್ಲಿ ಸಿಲಿಂಡರ್​ ಸ್ಫೋಟದಲ್ಲಿ ಸೋಮವಾರ 6 ಮಂದಿ ಅಸುನೀಗುವ ಮೂಲಕ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ.

jodhpur-cylinder-blast
ಜೋಧ್​ಪುರ ಸಿಲಿಂಡರ್​ ಸ್ಫೋಟ
author img

By

Published : Dec 13, 2022, 9:54 AM IST

ಜೋಧಪುರ: ರಾಜಸ್ಥಾನ ಜೋಧ್​ಪುರದ ಮದುವೆ ಮನೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಸಿಲಿಂಡರ್​ ಸ್ಫೋಟದಲ್ಲಿ ವರನ ತಾಯಿ ಸೇರಿದಂತೆ ಸೋಮವಾರ 6 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 18 ಕ್ಕೆ ಏರಿಕೆ ಕಂಡಿದೆ. ದುರ್ಘಟನೆಯಲ್ಲಿ 34 ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಜೋಧಪುರದ ಶೇರ್ಗಢ್‌ನ ಭುಂಗ್ರಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. 51 ಜನರಿದ್ದ ಮನೆಯಲ್ಲಿ ಅಡುಗೆ ಮಾಡುವಾಗ ಸಿಲಿಂಡರ್​ ಸ್ಫೋಟವಾಗಿತ್ತು. ಘಟನೆಯಲ್ಲಿ 12 ಜನರು ಬೆಂಕಿಗಾಹುತಿಯಾಗಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಮತ್ತೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೂ ಐವರ ಸ್ಥಿತಿ ಚಿಂತಾಜನಕವಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ವರನ ತಾಯಿ ಅಸುನೀಗಿದ್ದಾರೆ. ಹಲವು ಗಾಯಾಳುಗಳನ್ನು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಏರುತ್ತಿರುವುದು ಬಂಧುಗಳಲ್ಲಿ ಆತಂಕ ಉಂಟು ಮಾಡಿದೆ.

ಓದಿ: ಅಂತಾರಾಷ್ಟ್ರೀಯ ಡ್ರಗ್ಸ್​ ದಂಧೆ ಭೇದಿಸಿದ ಪೊಲೀಸರು.. ತಮಿಳುನಾಡಿನ ಇಬ್ಬರು ಪೆಡ್ಲರ್​ಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.