ETV Bharat / bharat

ಜೈಲಿನಲ್ಲಿರುವ ಪತಿ ಬಿಡುಗಡೆಗಾಗಿ ಮಹಿಳೆ ಏಕಾಂಗಿ ಪ್ರತಿಭಟನೆ! - ಇರ್ಫಾನ್ ಅಹ್ಮದ್​ ಮಿರ್

ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅವರನ್ನು ದಯಮಾಡಿ ಬಿಡುಗಡೆ ಮಾಡಿ ಎಂದು ಆಗ್ರಹಿಸಿ ಮಹಿಳೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾಳೆ.

Woman protest
Woman protest
author img

By

Published : Jul 13, 2021, 2:10 PM IST

ಶ್ರೀನಗರ: ಜೈಲಿನಲ್ಲಿರುವ ಪತಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಟಮಾಲೂ ನಿವಾಸಿ ಸಬಾ ರೆಹಮಾನ್ (25) ಪ್ರೆಸ್ ಕಾಲೋನಿಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಜೈಲಿನಲ್ಲಿರುವ ಪತಿ ಇರ್ಫಾನ್ ಅಹ್ಮದ್​ ಮಿರ್​ ಅವರನ್ನು ನಿರಪರಾಧಿ ಎಂದು ಘೋಷಿಸಿ ಉಧಂಪುರ ಜೈಲಿನಿಂದ ಬಿಡುಗಡೆ ಮಾಡಿ ಎಂದು ಆಡಳಿತಕ್ಕೆ ಮನವಿ ಮಾಡಿದ್ದಾರೆ.

‘ಆತ್ಮಹತ್ಯೆಗೆ ಯತ್ನಿಸಿದ್ದೆ’

ನನ್ನ ಪತಿ ಇರ್ಫಾನ್​ ನನ್ನು ಬಂಧಿಸಿ ಮೂರು ವರ್ಷಗಳಾಗಿವೆ. ಅವರು ಈವರೆಗೆ ನನ್ನ ಮಗುವನ್ನೂ ನೋಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಮನನೊಂದು ಮೇ 31 ರಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದ್ರೆ, ಭದ್ರತಾ ಸಿಬ್ಬಂದಿ ನನ್ನ ರಕ್ಷಿಸಿದ್ರು ಎಂದರು.

ಐದು ವರ್ಷಗಳ ಹಿಂದೆ ವಿವಾಹ

ಐದು ವರ್ಷಗಳ ಹಿಂದೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಿವಾಸಿ ಇರ್ಫಾನ್ ಅಹ್ಮದ್ ಮಿರ್ ಅವರನ್ನು ಸಬಾ ವಿವಾಹವಾದರು. ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದ ಇರ್ಫಾನ್​, ಅನೇಕ ಬಾರಿ ದೂರದೂರಿಗೆ ಪ್ರಯಾಣ ಬೆಳೆಸುತ್ತಿದ್ರು. ಈ ವೇಳೆ ನನ್ನ ಅತ್ತೆ ನನಗೆ ಕಿರುಕುಳ ಕೊಡುತ್ತಿದ್ದರು. ಆಗ ನಾನು ನನ್ನ ಪೋಷಕರೊಂದಿಗೆ ಇರಲು ನಿರ್ಧರಿಸಿದೆ ಎಂದ್ರು.

ಅಕ್ರಮ ವಸ್ತು ಸಾಗಿಸುತ್ತಿದ್ದ ಆರೋಪದಡಿ ಬಂಧನ

ನನ್ನ ಪತಿ ಅಕ್ರಮ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಿ ಅವರನ್ನು ಪೊಲೀಸರು ಬಂಧಿಸಿದರು. ಟ್ರಕ್​ನಿಂದ ಏನನ್ನು ವಶಪಡಿಸಿಕೊಳ್ಳಲಾಗಿದೆ? ಯಾಕೆ ಬಂಧಿಸಲಾಯಿತು ಅನ್ನೋದ್ರ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಿದರು. ನನ್ನ ಪತಿ ಭೇಟಿಯಾಗಲು ಉಧಂಪುರಕ್ಕೆ ಹೋಗಲು ನನ್ನ ಬಳಿ ಹಣವಿಲ್ಲ. ಮಗಳ ಖರ್ಚನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಸಹೋದರ ನನ್ನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರೂ, ಅವರಿಗೆ ನಾನು ಹೊರೆಯಾಗಿದ್ದೇನೆ ಎಂದು ಭಾವುಕರಾದರು.

ಬಂಧನದ ಬಳಿಕ ಎರಡು ಬಾರಿ ಭೇಟಿ

ಇರ್ಫಾನ್ ಬಂಧನದ ಬಳಿಕ ಸಬಾ ಎರಡು ಬಾರಿ ಭೇಟಿಯಾಗಿದ್ದರಂತೆ. ಅವರ ಬಂಧನದ ವಿಷಯ ತಿಳಿದಾಗ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆ ಭೇಟಿ ಮಾಡಿದ್ದೆ ಎಂದಿದ್ದಾರೆ. ಇರ್ಫಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನನ್ನ ಮಗಳು ಅವರ ಮುಖವನ್ನೂ ನೋಡಿಲ್ಲ, ದಯವಿಟ್ಟು ಅವರನ್ನು ಬಿಡುಗಡೆ ಮಾಡಿ ಎಂದು ಆಡಳಿತಕ್ಕೆ ಮೊರೆಯಿಟ್ಟಿದ್ದಾರೆ.

‘ಜಮೀನು ಮಾರಲು ತಯಾರಿಲ್ಲ’

ಈ ಬಗ್ಗೆ ಇರ್ಫಾನ್ ಸಹೋದರ ವಾಸಿಮ್ ಪ್ರತಿಕ್ರಿಯಿಸಿ, ನನ್ನ ಸಹೋದರ ಮಾದಕವಸ್ತು ಸಾಗಿಸುತ್ತಿದ್ದ ಎಂಬ ಆರೋಪದಡಿ ಬಂಧಿಸಲಾಗಿದೆ. ನನ್ನ ಅಣ್ಣನನ್ನು ಬಿಡುಗಡೆ ಮಾಡಿಸಲು ನಮ್ಮ ಅತ್ತಿಗೆ ಜಮೀನು ಮಾರಬೇಕೆಂದು ಪಟ್ಟು ಹಿಡಿದಿದ್ದಾಳೆ. ಆದರೆ, ನಮಗೆ ಜಮೀನು ಮಾರಲು ಇಷ್ಟವಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.