ಶ್ರೀನಗರ: ಗಣರಾಜ್ಯೋತ್ಸವ ಪ್ರಯುಕ್ತ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಜ. 26 ರಿಂದ 31ರ ತನಕ ವರ್ಚುಯಲ್ ಭಾರತ್ ಪರ್ವ್- 2021ನನ್ನು ಆಯೋಜಿಸಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಭಾಗವಹಿಸಲು ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಂದು ಕಾರ್ಯಕ್ರಮದಲ್ಲಿ ಭಾರತದ ಪ್ರವಾಸೋದ್ಯಮ ತಾಣಗಳು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪಾಕಪದ್ಧತಿ, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತ ಸೇರಿದಂತೆ ಇಡೀ ಜಗತ್ತೇ ಕೊರೊನಾ ವಿರುದ್ಧ ಹೋರಾಡುತ್ತಲೇ ಇರುವುದರಿಂದ, ಈ ವರ್ಷ ಭಾರತ್ ಪರ್ವ್ ವರ್ಚುಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾಗುತ್ತಿದೆ.
ಓದಿ:ಮಂಜುಗಟ್ಟಿದ ಬದ್ರಿನಾಥ್ನ ಶೇಷ ನೇತ್ರ ಸರೋವರ..ವಿಡಿಯೋ ನೋಡಿ
ಪ್ರವಾಸೋದ್ಯಮ ಸಚಿವಾಲಯವು ವರ್ಚುಯಲ್ ವೀಕ್ಷಣೆಗಾಗಿ 3D ರೆಂಡರಿಂಗ್‌ನಲ್ಲಿ ಭಾರತ್ ಪರ್ವ್ನನ್ನು ಆಯೋಜಿಸಿದ್ದು. ಇದರಿಂದಾಗಿ ಬಳಕೆದಾರರು ಕೆಂಪು ಕೋಟೆಯ ಪ್ರಾಕಾರಗಳನ್ನು ಚಿತ್ರಿಸುವ ಪರ್ವ್ ಪ್ರದೇಶದಲ್ಲಿ ನ್ಯಾವಿಗೇಟ್ ಮಾಡಲು ಸಾಧ್ಯವಾಗುತ್ತದೆ.
ಇದು ಫುಡ್ ಕೋರ್ಟ್ ಮತ್ತು ಕರಕುಶಲ ಹಾಗೂ ಕೈಮಗ್ಗ ಮಳಿಗೆಗಳನ್ನು ಸಹ ಆಯೋಜಿಸುತ್ತದೆ. ಅಂತೆಯೇ, ಸಾಂಸ್ಕೃತಿಕ ಪ್ರದರ್ಶನಗಳು ಇತರ ಆಕರ್ಷಣೆಗಳೊಂದಿಗೆ ವಿಶೇಷ ವರ್ಚುಯಲ್ ಥಿಯೇಟರ್‌ನಲ್ಲಿರುತ್ತವೆ.
ಗಣರಾಜ್ಯೋತ್ಸವ ದಿನದಂದು ಸಂಜೆ 6 ರಿಂದ www.bharatparv2021.comನಲ್ಲಿ ಭಾರತ್ ಪರ್ವ್ ಆನ್‌ಲೈನ್‌ನಲ್ಲಿ ಪ್ರಾರಂಭವಾಗಲಿದೆ.