ಕಾಶ್ಮೀರ: ವೃತ್ತಿಪರ ಕಾಶ್ಮೀರಿ ಸೈಕ್ಲಿಸ್ಟ್ ಆದಿಲ್ ತೆಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 3,600 ಕಿಲೋಮೀಟರ್ ದೂರವನ್ನು ಎಂಟು ದಿನ, ಒಂದು ಗಂಟೆ 37 ನಿಮಿಷದಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ನಾರ್ಬಲ್ ಪ್ರದೇಶದ ಯುವ ಸೈಕ್ಲಿಸ್ಟ್ ಆದಿಲ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 3,600 ಕಿಲೋಮೀಟರ್ ದೂರವನ್ನು ಎಂಟು ದಿನ, ಒಂದು ಗಂಟೆ 37 ನಿಮಿಷದಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಓಂ ಮಹಾಜನ್ ಬರೆದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇವರು ಮುರಿದಿದ್ದಾರೆ.
ಶ್ರೀನಗರದ ಲಾಲ್ಚೌಕ್ ಪ್ರದೇಶದ ವಿಭಾಗೀಯ ಆಯುಕ್ತ ಪಾಂಡುರಂಗ್ ಕೆ ಪೋಲ್ ಅವರು ಚಾಲನೆ ನೀಡಿದ ನಂತರ ಬುದ್ಗಾಮ್ ಜಿಲ್ಲೆಯ ನಾರ್ಬಲ್ ಪ್ರದೇಶದ ಯುವ ಸೈಕ್ಲಿಸ್ಟ್ ಆದಿಲ್ ಮಾರ್ಚ್ 22 ರಂದು ತಮ್ಮ ಪ್ರಯಾಣ ಪ್ರಾರಂಭಿಸಿದರು.
ಸೈಕ್ಲಿಂಗ್ ಬಗ್ಗೆ ಉತ್ಸಾಹ ಹೊಂದಿದ್ದ ಆದಿಲ್ ಅವರು ಈಗಾಗಲೇ ಶ್ರೀನಗರದಿಂದ ಲೇಹ್‌ಗೆ 440 ಕಿಲೋಮೀಟರ್ ದೂರವನ್ನು ಕೇವಲ 26 ಗಂಟೆ, 30 ನಿಮಿಷಗಳಲ್ಲಿ ಕ್ರಮಿಸಿ ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸಿದ್ದರು.
ಓದಿ : ಭಾರತದ ಗಡಿ ಪ್ರವೇಶಿಸಿದ ಪಾಕ್ ಬಾಲಕ: ಆಹಾರ ನೀಡಿ ಮಾನವೀಯತೆ ಮೆರೆದ ಸೈನಿಕರು
ಸೈಕ್ಲಿಂಗ್ ಯಾತ್ರೆಯಲ್ಲಿ ಆದಿಲ್ ಅವರನ್ನು ಬೆಂಬಲಿಸಿದ ಮತ್ತು ಪ್ರಾಯೋಜಿಸಿದ ಅಬ್ರಾಕ್ ಆಗ್ರೋ ಈ ಮಹತ್ತರ ಸಾಧನೆಗೆ ಆದಿಲ್ ಅವರನ್ನು ಶ್ಲಾಘಿಸಿದ್ದಾರೆ. ವಿಶ್ವ ದಾಖಲೆ ನಿರ್ಮಿಸುವ ಕನಸು ಬೆನ್ನಟ್ಟಿದ ಆದಿಲ್ ಅಮೃತಸರಕ್ಕೆ ತೆರಳಿದರು.
ಅಲ್ಲಿ ಅವರು 4-5 ತಿಂಗಳು ಕಠಿಣ ತರಬೇತಿಗೆ ಒಳಗಾದರು. ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸೈಕ್ಲಿಂಗ್ ವಿಭಾಗದ ಹೆಚ್ಒಡಿಯಾಗಿದ್ದ ರಾಜೇಶ್ ಅವರು ತರಬೇತಿ ನೀಡಿದ್ದಾರೆ.