ETV Bharat / bharat

ಪತಿಯನ್ನೇ ಕೊಂದ ಪತ್ನಿ, ಶವ ಮನೆಯೊಳಗೆ ಮುಚ್ಚಿಟ್ಟ ಮಹಿಳೆ..! - ಶವ ಮನೆಯೊಳಗೆ ಮುಚ್ಚಿಟ್ಟ ಮಹಿಳೆ

ಪತಿಯನ್ನು ಕೊಂದು ಶವ ಐದು ದಿನಗಳ ಕಾಲ ಮನೆಯೊಳಗೆ ಮುಚ್ಚಿಟ್ಟ ಮಹಿಳೆ - ಜಾರ್ಖಂಡ್‌ನ ಜಮ್​ಶೆಡ್‌ಪುರದ ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Tags: *  Enter here.. Woman kills husband in Jharkhand
ಮೃತ ಅಮರನಾಥ್ ಸಿಂಗ್
author img

By

Published : Mar 10, 2023, 7:54 PM IST

ಜಮ್‌ಶೆಡ್‌ಪುರ (ಜಾರ್ಖಂಡ್‌): ಜಾರ್ಖಂಡ್‌ನ ಜಮ್​ಶೆಡ್‌ಪುರದ ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಂದು ಶವವನ್ನು ಐದು ದಿನಗಳ ಕಾಲ ಮನೆಯಲ್ಲಿಯೇ ಮುಚ್ಚಿ ಇಟ್ಟಿರುವ ಘಟನೆ ಜಾರ್ಖಂಡ್‌ನ ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಮಹಿಳೆ ವಶಕ್ಕೆ ಪಡೆದ ಪೊಲೀಸರು: ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಸ್ಥಳೀಯರು ಈ ಬಗ್ಗೆ ಮಾಹಿತಿ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮೃತರನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ರಿಯಲ್ ಎಸ್ಟೇಟ್ ಉದ್ಯಮಿ. ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ಕಾಲೋನಿಯ ರಸ್ತೆ ಸಂಖ್ಯೆ ಮೂರರಲ್ಲಿ ವಾಸವಾಗಿದ್ದರು. ಅವರು ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಕಾಣಿಸುತ್ತಿರಲಿಲ್ಲ.

ಇದನ್ನೂ ಓದಿ: ಬಿಸಿ ಟೀ ತರಲಿಲ್ಲ ಎಂದು ಗದರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ..

ಮನೆ ಸುತ್ತ ವಿದ್ಯುತ್ ತಂತಿ ಬೇಲಿಗೆ ಅಳವಡಿಸಿದ್ದ ಮಹಿಳೆ: ಅಮರನಾಥ್ ಸಿಂಗ್ ನೆರೆಹೊರೆಯವರು, ಅವರ ಮನೆಗೆ ಹೋಗಿ ಮೃತರ ಪತ್ನಿಯಲ್ಲಿ ಅವರ ಬಗ್ಗೆ ವಿಚಾರಿಸಿದ್ದಾರೆ. ಆದ್ರೆ, ಸಿಂಗ್ ಅವರ ಪತ್ನಿ ಮೀರಾ, ನೆರೆಹೊರೆಯವರ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಲಿಲ್ಲ. ಬದಲಿಗೆ ಎಲ್ಲರನ್ನೂ ಗದರಿಸಿ ಓಡಿಸಿದರು. ಸ್ಥಳೀಯರು ಅನುಮಾನಗೊಂಡು ಪುಣೆಯಲ್ಲಿ ವಾಸಿಸುವ ಸಿಂಗ್ ಅವರ ಮಗನಿಗೆ ವಿಷಯ ತಿಳಿಸಿದ್ದಾರೆ. ನೆರೆಹೊರೆಯವರು ಮನೆಗೆ ನುಸುಳದಂತೆ ತಡೆಯಲು ಸಿಂಗ್ ಅವರ ಪತ್ನಿ ಮನೆಯ ಸುತ್ತ ವಿದ್ಯುತ್ ತಂತಿ ಬೇಲಿಗೆ ಅಳವಡಿಸಿದ್ದರು ಎಂದು ಸ್ಥಳೀಯರು ಆರೋಪಿದ್ದಾರೆ.

ಇದನ್ನೂ ಓದಿ: ಹೆಚ್ಚು ಪೌಷ್ಟಿಕಾಂಶ ಮಾತ್ರೆ ತಿನ್ನುವ ಆಟ; ವಿದ್ಯಾರ್ಥಿನಿ ಸಾವು, ಐವರು ಗಂಭೀರ

ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ: ಮನೆಯೊಳಗೆ ಅಮರನಾಥ್ ಸಿಂಗ್ ದೇಹ ಸುಟ್ಟ ಸ್ಥಿತಿಯಲ್ಲಿ ಸಿಗುತ್ತಿದ್ದಂತೆ ಸ್ಥಳೀಯರು ಮನೆಗೆ ನುಗ್ಗಿದ್ದಾರೆ. ಆ ಬಳಿಕ ಸಿಂಗ್​ ಅವರ ಪುತ್ರ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ, ಮೀರಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮೃತದೇಹವನ್ನು ಎಂಜಿಎಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಮದುವೆಯಾದ ಮರುದಿನವೇ ಹೆಂಡತಿಯನ್ನು ಟ್ರಾಫಿಕ್​ನಲ್ಲಿ ಬಿಟ್ಟು ಪರಾರಿಯಾದ ನವವಿವಾಹಿತ!

ಪತಿಯೊಂದಿಗೆ ಪತ್ನಿಯ ನಿತ್ಯ ಜಗಳ- ಸ್ಥಳೀಯರ ಆರೋಪ: ಈ ಪ್ರದೇಶದಲ್ಲಿ ನಾಲ್ಕೈದು ದಿನಗಳಿಂದ ಅಮರನಾಥ್ ಸಿಂಗ್ ಕಾಣಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿ ಮಹಿಳೆ ಮೀರಾ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಪ್ರತಿನಿತ್ಯ ಮನೆಯಲ್ಲಿನ ವಸ್ತುಗಳನ್ನು ಹೊರಗೆ ಎಸೆದು ಪತಿಯೊಂದಿಗೆ ಜಗಳವಾಡುತ್ತಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಹುಣಸೂರು ನಗರಸಭೆ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.