ರಾಂಚಿ(ಜಾರ್ಖಂಡ್): ಜಾರ್ಖಂಡ್ನಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಭಣಗೊಂಡಿದ್ದು, ಮೈತ್ರಿ ಸರ್ಕಾರದ ಶಾಸಕರು ಛತ್ತೀಸ್ಗಢ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಶಾಸಕ ಸ್ಥಾನ ರದ್ಧುಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿರುವ ಬೆನ್ನಲ್ಲೇ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.
ರಾಯಪುರದ ಮೇಘೇರ್ ರೆಸಾರ್ಟ್ನಲ್ಲಿ ಶಾಸಕರನ್ನು ಇರಿಸಲಾಗಿದೆ. ಆಡಳಿತ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಯುಪಿಎ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದಿಂದ ಎರಡು ಬಸ್ಸು ವಿಮಾಣ ನಿಲ್ದಾಣದತ್ತ ಪ್ರಯಾಣಿಸಿದ್ದು, ಅಲ್ಲಿಂದ ರಾಯಪುರ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಶಾಸಕರನ್ನ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ಹೇಮಂತ್ ಸೊರೆನ್ ಶಾಸಕ ಸ್ಥಾನಕ್ಕೆ ಕುತ್ತು.. ಕಲ್ಪನಾ ಸೊರೆನ್ ಜಾರ್ಖಂಡ್ ಮುಂದಿನ ಸಿಎಂ?
ಮಹಾರಾಷ್ಟ್ರದ ಮಾದರಿಯಲ್ಲಿ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೇಮಂತ್ ಸೂರೇನ್ ಅವರು ಕಳೆದ ಸಲ ಸಿಎಂ ಆಗಿದ್ದಾಗ ಗಣಿಗಾರಿಕೆ ಗುತ್ತಿಗೆ ನವೀಕರಣದಲ್ಲಿ ಮಾಡಿದ ಅಕ್ರಮ ವಿಚಾರವಾಗಿ ಅವರನ್ನು ಶಾಸಕ ಸ್ಥಾನದಿಂದ ಅಹರ್ನಗೊಳಿಸಬೇಕೆಂದು ಬಿಜೆಪಿ ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆದಿದೆ.
81 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟ 49 ಶಾಸಕರ ಬಲ ಹೊಂದಿದ್ದು, ಜೆಎಂಎಂ 30 ಶಾಸಕರು, ಕಾಂಗ್ರೆಸ್ 18 ಶಾಸಕರನ್ನು ಹೊಂದಿದೆ. ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ 26 ಶಾಸಕರ ಸಂಖ್ಯಾಬಲ ಹೊಂದಿದೆ.