ETV Bharat / bharat

ಐಎಎಸ್​​ ಪೂಜಾ ಸಿಂಘಾಲ್​ ಇಡಿ ಪ್ರಕರಣ.. 16 ಬ್ಯಾಂಕ್​ ಖಾತೆಗಳಿಂದ ₹59.97 ಕೋಟಿ ವರ್ಗಾವಣೆ

ನರೇಗಾ ಯೋಜನೆಯ ಅವ್ಯವಹಾರ ಮತ್ತು ಅಕ್ರಮ ಗಣಿ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರ್ಖಂಡ್​ನ ಗಣಿ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಐಎಎಸ್​ ಅಧಿಕಾರಿ ಪೂಜಾ ಸಿಂಘಾಲ್ ಇಂದು ED ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

money laundering case on Pooja Singhal
money laundering case on Pooja Singhal
author img

By

Published : May 10, 2022, 7:31 PM IST

ರಾಂಚಿ(ಜಾರ್ಖಂಡ್​): ಅಕ್ರಮ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್​​ ಅಧಿಕಾರಿ ಪೂಜಾ ಸಿಂಘಾಲ್​​ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದು, ವಿಚಾರಣೆಗೊಳಪಟ್ಟಿದ್ದಾರೆ. ಇದರ ಬೆನ್ನಲ್ಲೇ 16 ಬ್ಯಾಂಕ್​​ ಖಾತೆಗಳಿಂದ 59.97 ಕೋಟಿ ರೂಪಾಯಿ ವರ್ಗಾವಣೆ ಆಗಿರುವ ಮಾಹಿತಿ ಬಹಿರಂಗಗೊಂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕಳೆದ ಕೆಲ ದಿನಗಳ ಹಿಂದೆ ಜಾರ್ಖಂಡ್​ನ ಹಿರಿಯ ಐಎಎಸ್​​ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಅವರ ಪತಿ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ 19.31 ಕೋಟಿ ರೂ. ನಗದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ವಿಚಾರಣೆಗೊಳಪಡುವಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅವರು ಇಂದು ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿ, ವಿಚಾರಣೆಗೊಳಪಟ್ಟಿದ್ದು, ಇದರ ಬೆನ್ನಲ್ಲೇ 16 ಬ್ಯಾಂಕ್​ ಖಾತೆಗಳ ಮೂಲಕ 59.97 ಕೋಟಿ ರೂ.ಗೂ ಅಧಿಕ ಹಣಕಾಸಿನ ವಹಿವಾಟು ನಡೆದಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆಯಲ್ಲಿ 'ಬೇಬಿ ಬರ್ತ್​​'... ಕೆಲ ಆಯ್ದ ರೈಲುಗಳಲ್ಲಿ ಈ ಸೇವೆ!

2000ನೇ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿರುವ ಪೂಜಾ ಸಿಂಘಾಲ್​, ಜಾರ್ಖಂಡ್​ನ ಗಣಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜೂನಿಯರ್ ಇಂಜಿನಿಯರ್​ ಆಗಿ ಕೆಲಸ ಮಾಡ್ತಿದ್ದ ವೇಳೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಣ ವಂಚಿಸಿರುವ ಆರೋಪವಿದೆ.

2008 ರಿಂದ 11ರ ಅವಧಿಯಲ್ಲಿ ಜಾರ್ಖಂಡ್​​ನ ಖುಂತಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 18 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಹೀಗಾಗಿ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ನಿವಾಸ ಸೇರಿ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಒಟ್ಟಾರೆ 18 ಕಡೆಗಳಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.