ETV Bharat / bharat

ಮೇವು ಹಗರಣ: ಲಾಲೂ ಜಾಮೀನು ಅರ್ಜಿ ತಿರಸ್ಕರಿಸಿದ ಜಾರ್ಖಂಡ್ ಹೈಕೋರ್ಟ್​​​

Lalu Yadav
ಲಾಲು ಪ್ರಸಾದ್ ಯಾದವ್​
author img

By

Published : Feb 19, 2021, 5:39 PM IST

Updated : Feb 19, 2021, 6:08 PM IST

17:06 February 19

ಲಾಲೂಗೆ ಮುಂದುವರೆದ ಸಂಕಷ್ಟ

ರಾಂಚಿ (ಜಾರ್ಖಂಡ್): ಮೇವು ಹಗರಣ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರ ನೇತೃತ್ವದ ನ್ಯಾಯಪೀಠ ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿ ವಜಾಗೊಳಿಸಿದೆ.

ಲಾಲೂ ಪ್ರಸಾದ್ ಯಾದವ್ ಈಗಾಗಲೇ 900 ಕೋಟಿ ರೂ.ಗಳ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಈಗ ಅದೇ ಮೇವು ಹಗರಣದ ದುಮ್ಕಾ ಖಜಾನೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತರೆ ಜೈಲಿನಿಂದ ಬಿಡುಗಡೆಯಾಗಬಹುದಿತ್ತು. ಆದರೆ ಈಗ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿದೆ. 

ಇನ್ನು ಎರಡು ತಿಂಗಳುಗಳ ಕಾಲ ಲಾಲೂ ಪ್ರಸಾದ್​ ಯಾದವ್ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಜಾಮೀನು ಸಿಗಲು ನಂತರವಷ್ಟೇ ಮನವಿ ಸಲ್ಲಿಸಬಹುದಾಗಿದೆ.

Last Updated : Feb 19, 2021, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.