ETV Bharat / bharat

‘ನಮ್ಮ ಹುಲಿ ಜಗರ್ನಾಥ್​ ಇನ್ನಿಲ್ಲ’.. ಸಿಎಂ ಸಂತಾಪ - ರಾಜಕೀಯ ನಾಯಕರು ಸಂತಾಪ

ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಂತಾಪ ಸೂಚಿಸಿದ್ದಾರೆ.

Jharkhand education minister passed away  Jharkhand education minister Jagarnath Mahato  Jagarnath Mahato Passed Away  ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ನಿಧನ  ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಇನ್ನಿಲ್ಲ  ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಂತಾಪ  ಸಚಿವ ಜಗರ್ನಾಥ್ ಮಹತೋ ಅವರು ಚೆನ್ನೈನ ಆಸ್ಪತ್ರೆಯಲ್ಲಿ ನಿಧನ  ಹಲವು ದಿನಗಳಿಂದ ಅನಾರೋಗ್ಯ  ರಾಜಕೀಯ ನಾಯಕರು ಸಂತಾಪ
ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ನಿಧನ
author img

By

Published : Apr 6, 2023, 10:54 AM IST

Updated : Apr 6, 2023, 11:41 AM IST

ರಾಂಚಿ: ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರ ಆರೋಗ್ಯ ಸಮಸ್ಯೆ ಹಿನ್ನೆಲೆ ರಾಂಚಿಯಿಂದ ಚೆನ್ನೈಗೆ ವಿಮಾನದ ಮೂಲಕ ಕರೆತರಲಾಗಿತ್ತು. ಚಿಕಿತ್ಸೆ ವೇಳೆಯೇ ಶಿಕ್ಷಣ ಸಚಿವರು ಕೊನೆಯುಸಿರೆಳೆದಿದ್ದಾರೆ. ಸಚಿವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಬೆಳಗ್ಗೆ 9ಕ್ಕೆ ಜಗರ್ನಾಥ್ ಮಹತೋ ಕೊನೆಯುಸಿರೆಳೆದಿರುವ ಬಗ್ಗೆ ಚೆನ್ನೈನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಬಜೆಟ್ ಅಧಿವೇಶನದ ವೇಳೆ ಹದಗೆಟ್ಟ ಆರೋಗ್ಯ: ಜಗರ್ನಾಥ್ ಮಹತೋ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾರ್ಚ್ 14ರಂದು ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಅವರನ್ನು ರಾಂಚಿಯ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಎಂ ಹೇಮಂತ್ ಸೊರೇನ್ ಆಸ್ಪತ್ರೆಗೆ ತೆರಳಿ ಸಚಿವರ ಆರೋಗ್ಯವನ್ನು ವಿಚಾರಿಸಿದರು. ಅವರ ಸ್ಥಿತಿ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸುವಂತೆ ಸಿಎಂ ಸೂಚಿಸಿದ್ದರು. ಸಿಎಂ ಸೋರೆನ್ ಅವರ ಸಲಹೆ ಮೇರೆಗೆ ಅವರನ್ನು ತಕ್ಷಣವೇ ಚೆನ್ನೈಗೆ ವಿಮಾನದಲ್ಲಿ ರವಾನಿಸಲಾಗಿತ್ತು. ಅವರು ಚೆನ್ನೈನ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಶಿಕ್ಷಣ ಸಚಿವರ ನಿಧನದ ಸುದ್ದಿಯಿಂದ ಜಾರ್ಖಂಡ್‌ನ ರಾಜಕೀಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಎಲ್ಲರೂ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

  • झारखंड सरकार के मंत्री श्री जगरनाथ महतो जी के चेन्नई के अस्पताल में निधन की बेहद दुःखद सूचना मिली है।
    लंबे समय से बीमारी को हराते हुए योद्धा की भांति डंटे रहने वाले जगरनाथ जी का चले जाना पूरे झारखंड के लिए अत्यंत दुखदायी है।
    राजनैतिक भिन्नताओं के बावजूद व्यक्तिगत रूप से उनकी… pic.twitter.com/6JlutQ5E7O

    — Babulal Marandi (@yourBabulal) April 6, 2023 " class="align-text-top noRightClick twitterSection" data=" ">

ಓದಿ: ನಿಪ್ಪಾಣಿ ಚೆಕ್​ಪೋಸ್ಟ್​ನಲ್ಲಿ 1.5ಕೋಟಿ ರೂ. ಹಣ ಜಪ್ತಿ ಮಾಡಿದ ಪೊಲೀಸರು

ಬಿಜೆಪಿ ಮುಖಂಡರ ಟ್ವೀಟ್​: ಬಿಜೆಪಿ ಮುಖಂಡ ಬಾಬುಲಾಲ್ ಮರಾಂಡಿ ಕೂಡ ಶಿಕ್ಷಣ ಸಚಿವರಿಗೆ ಟ್ವೀಟ್ ಮಾಡುವ ಮೂಲಕ ಸಂತಾಪ ಸಲ್ಲಿಸಿದ್ದಾರೆ. ಜಾರ್ಖಂಡ್ ಸರ್ಕಾರದ ಸಚಿವ ಶ್ರೀ ಜಗರ್ನಾಥ್ ಮಹತೋ ಜಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದ ಬಗ್ಗೆ ನನಗೆ ತುಂಬಾ ದುಃಖದ ಮಾಹಿತಿ ಬಂದಿದೆ. ದೀರ್ಘ ಕಾಲದವರೆಗೆ ರೋಗವನ್ನು ಸೋಲಿಸಿ ಯೋಧನಂತೆ ಹೋರಾಡಿದ ಜಗರ್ನಾಥ್ ಜಿ ಅವರ ಅಗಲಿಕೆ ಇಡೀ ಜಾರ್ಖಂಡ್‌ಗೆ ತುಂಬಾ ದುಃಖಕರವಾಗಿದೆ. ವೈಯಕ್ತಿಕವಾಗಿ, ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಅವರ ಚೈತನ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ದೇವರು ಅವರ ಪಾದದಲ್ಲಿ ಸ್ಥಾನ ನೀಡಲಿ. ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ ಓಂ ಶಾಂತಿ.. ಎಂದು ಟ್ವೀಟ್​ ಮಾಡಿದ್ದಾರೆ.

  • अपूरणीय क्षति!
    हमारे टाइगर जगरनाथ दा नहीं रहे!
    आज झारखण्ड ने अपना एक महान आंदोलनकारी, जुझारू, कर्मठ और जनप्रिय नेता खो दिया। चेन्नई में इलाज के दौरान आदरणीय जगरनाथ महतो जी का निधन हो गया।
    परमात्मा दिवंगत आत्मा को शांति प्रदान कर शोकाकुल परिवार को दुःख की यह विकट घड़ी सहन करने की…

    — Hemant Soren (@HemantSorenJMM) April 6, 2023 " class="align-text-top noRightClick twitterSection" data=" ">

ಸಿಎಂ ಸೂರೇನ್​ ಸಂತಾಪ​: ಸಿಎಂ ಹೇಮಂತ್ ಸೊರೇನ್ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮ ಹುಲಿ ಜಗರ್ನಾಥ್ ಇನ್ನಿಲ್ಲ! ಇಂದು ಜಾರ್ಖಂಡ್ ತನ್ನ ಮಹಾನ್ ಚಳವಳಿಗಾರ, ಹೋರಾಟಗಾರ, ಶ್ರಮಶೀಲ ಮತ್ತು ಜನಪ್ರಿಯ ನಾಯಕನನ್ನು ಕಳೆದುಕೊಂಡಿದೆ. ಗೌರವಾನ್ವಿತ ಜಗರ್ನಾಥ್ ಮಹತೋ ಜಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

ಓದಿ: ಟೀಂ ಇಂಡಿಯಾದ ಮಾಜಿ ಆಕ್ರಮಣಕಾರಿ ಓಪನರ್​ ಇನ್ನಿಲ್ಲ..

Last Updated : Apr 6, 2023, 11:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.