ರಾಜಸ್ಥಾನ: ಕೋವಿಡ್ ಲಾಕ್‌ಡೌನ್ ನಿಯಮ ಮೀರಿದವರಿಗೆ ತಿಲಕ ಇಟ್ಟು ಆರತಿ ಬೆಳಗಿ ಹೊಸ ರೀತಿಯಲ್ಲಿ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.
ಝಲವಾರ್ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲವರು ಮನೆಯಿಂದ ಹೊರಬಂದು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ. ಲಾಠಿ ಬೀಸುವುದಕ್ಕಿಂತ ಈ ರೀತಿ ಮಾಡಿದ್ರೆ ಬುದ್ಧಿ ಕಲಿಯಬಹುದು ಎಂದು ಪೊಲೀಸರು ಹೊಸ ತಂತ್ರದ ಮೊರೆ ಹೋಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಬಲ್ವೀರ್ ಸಿಂಗ್ ಕೋವಿಡ್ ಬಗ್ಗೆ ಅರಿವು ಮೂಡಿಸಲು ನಾವೆಲ್ಲ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಜನ ಸಹ ಇದನ್ನರಿತು ನಿಯಮ ಪಾಲಿಸಬೇಕು ಎಂದಿದ್ದಾರೆ.
ಓದಿ:ರಾಜ್ಯದಲ್ಲಿಂದು 34,281 ಮಂದಿಗೆ ವೈರಸ್ ದೃಢ: 468 ಸೋಂಕಿತರು ಬಲಿ