ETV Bharat / bharat

ಸಿನಿಮಾ ನಟ ನಟಿಗೆ ಕಿರುಕುಳ ಆರೋಪ: ಫೇಸ್‌ಬುಕ್​ನಲ್ಲಿ ಅಳಲು ತೋಡಿಕೊಂಡ ನವನಿತಾ - ನಟಿ ನವನಿತಾ

ಫೇಸ್‌ಬುಕ್ ಲೈವ್‌ಗೆ ಬಂದು ಅಳಲು ತೋಡಿಕೊಂಡ ನಟಿ ನವನಿತಾ, 'ಸರಕು ವಾಹನದ ಚಾಲಕನಿಂದ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕೂಡ ಬಂದಿತ್ತು, ಆದರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

jeetu kamal and wife face harassment in kolkata
ನಟ ಜೀತು ಕಮಲ್ ಮತ್ತು ನಟಿ ನವನಿತಾ ದಾಸ್
author img

By

Published : Dec 9, 2022, 10:00 AM IST

ಕೋಲ್ಕತ್ತಾ: ನಟ ಜೀತು ಕಮಲ್ ಮತ್ತು ನಟಿ ನವನಿತಾ ದಾಸ್ ಅವರ ಕಾರಿಗೆ ಸರಕು ಸಾಗಣೆ ವಾಹನವೊಂದು ಡಿಕ್ಕಿ ಹೊಡೆದಿದೆ. ಇದಕ್ಕೆ ನವನಿತಾ-ಜಿತು ಅವರ ಕಾರು ಚಾಲಕ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ, ಸರಕು ಸಾಗಣೆ ವಾಹನದ ಚಾಲಕ ಹಲ್ಲೆಗೆ ಯತ್ನಿಸಿ, ನಟಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಶಾಸ್ತ್ರೀಯ ಸಂಗೀತದ ಮಾಂತ್ರಿಕ ರಶೀದ್ ಖಾನ್ ಅವರು ನಗರ ಪೊಲೀಸರ ವಿರುದ್ಧ ಅಸಭ್ಯ ವರ್ತನೆ ಮತ್ತು ಬೆದರಿಕೆಯ ಆರೋಪಗಳನ್ನು ಮಾಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.

ಏನಿದು ಘಟನೆ: ನವನಿತಾ ಅವರು ನೀಡಿದ ಮಾಹಿತಿ ಪ್ರಕಾರ, ಜೀತು ಜೊತೆ ಗುರುವಾರ ಮಧ್ಯಾಹ್ನ ತಮ್ಮ ಕಾರಿನಲ್ಲಿ ನಿಮ್ತಾ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಅವರ ಕಾರಿಗೆ ಸರಕು ಸಾಗಣೆ ವಾಹನವೊಂದು ಡಿಕ್ಕಿ ಹೊಡೆದಿದೆ. ಇದಕ್ಕೆ ಕಾರು ಚಾಲಕ ವಿರೋಧ ವ್ಯಕ್ತಪಡಿಸಿದಾಗ, ಸರಕು ಸಾಗಣೆ ವಾಹನದ ಚಾಲಕ ಮೊದಲು ನಮ್ಮನ್ನು ತಳ್ಳಲು ಬಂದು, ಬೆದರಿಕೆ ಹಾಕಲು ಪ್ರಾರಂಭಿಸಿದನು.

ಆ ನಂತರ ಗಲಾಟೆ ನಡೆದು ಎರಡೂ ಕಡೆಯವರು ನಿಮ್ತಾ ಠಾಣೆಗೆ ತೆರಳಿದೆವು. ಈ ವೇಳೆ, ನನಗೆ ಡಿಕ್ಕಿ ಹೊಡೆದ ವಾಹನದ ಚಾಲಕ ಕಿರುಕುಳ ನೀಡಿದ್ದಾನೆ. ಪೊಲೀಸ್ ಸಿಬ್ಬಂದಿ ಸಹಾಯ ಕೇಳಿದಾಗ ಅವರು ಸಹ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ಇದನ್ನೂ ಓದಿ: ನಟಿ ರಂಜನಿ ರಾಘವನ್ ಬರೆದಿರುವ 'ಸ್ವೈಪ್ ರೈಟ್' ಕಾದಂಬರಿ ಬಿಡುಗಡೆ

ಈ ಕುರಿತು ಫೇಸ್‌ಬುಕ್ ಲೈವ್‌ಗೆ ಬಂದು ಅಳಲು ತೋಡಿಕೊಂಡ ನಟಿ ನವನಿತಾ, ಸರಕು ವಾಹನದ ಚಾಲಕನಿಂದ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕೂಡ ಬಂದಿತ್ತು, ಆದರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಜತೆಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.