ETV Bharat / bharat

JEE-Mains Result: ಕನ್ನಡಿಗ ಸೇರಿ 17 ಮಂದಿಗೆ ನೂರಕ್ಕೆ ನೂರರಷ್ಟು ಅಂಕ - ಜೆಇಇ-ಮುಖ್ಯ ಪರೀಕ್ಷೆಯ ಲೇಟೆಸ್ಟ್ ಸುದ್ದಿ

ಜೆಇಇ-ಮುಖ್ಯ ಪರೀಕ್ಷೆಯ ಮೂರನೇ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ಓರ್ವ ವಿದ್ಯಾರ್ಥಿ ಸೇರಿದಂತೆ 17 ಮಂದಿ ನೂರಕ್ಕೆ ನೂರರಷ್ಟು ಅಂಕ ಪಡೆದಿದ್ದಾರೆ.

JEE-Mains results announced, 17 candidates score 100 percentile
JEE-Mains results: 17 ಮಂದಿಗೆ ನೂರಕ್ಕೆ ನೂರರಷ್ಟು ಅಂಕ
author img

By

Published : Aug 7, 2021, 9:03 AM IST

ನವದೆಹಲಿ: ಎಂಜಿನಿಯರಿಂಗ್ ಕೋರ್ಸ್​ಗೆ ಪ್ರವೇಶ ಪರೀಕ್ಷೆಯಾದ ಜೆಇಇ-ಮುಖ್ಯ ಪರೀಕ್ಷೆಯ ಮೂರನೇ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, 17 ಮಂದಿ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಸ್ಕೋರ್​ ಮಾಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಘೋಷಿಸಿದೆ.

ಕರ್ನಾಟಕದ ಗೌರಬ್ ದಾಸ್, ಆಂಧ್ರಪ್ರದೇಶದ ಕರ್ಣಮ್ ಲೋಕೇಶ್, ದುಗ್ಗಿನೇನಿ ವೆಂಕಟ ಪನೀಶ್, ಪಸಾಲ ವೀರ ಶಿವ ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು, ಬಿಹಾರದ ವೈಭವ ವಿಶಾಲ್, ರಾಜಸ್ಥಾನದ ಅನ್ಶುಲ್ ವರ್ಮಾ, ದೆಹಲಿಯ ರುಚಿರ್ ಬನ್ಸಾಲ್, ಪ್ರವಾರ್ ಕಟಾರಿಯಾ, ಹರಿಯಾಣದ ಹರ್ಷ್​ ಮತ್ತು ಅನ್ಮೋಲ್, ತೆಲಂಗಾಣದ ಪೊಲು ಲಕ್ಷ್ಮೀ ಸಾಯಿ ಲೋಕೇಶ್ ರೆಡ್ಡಿ, ಮಧುರ್ ಆದರ್ಶ್ ರೆಡ್ಡಿ ಮತ್ತು ವೆಲವಲಿ ವೆಂಕಟ ಮತ್ತು ಉತ್ತರ ಪ್ರದೇಶದಿಂದ ಪಾಲ್ ಅಗರ್ವಾಲ್ ಮತ್ತು ಅಮಯ್ಯ ಸಿಂಘಾಲ್ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ಬಹ್ರೇನ್, ಕೊಲಂಬೊ, ದೋಹಾ, ದುಬೈ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮಸ್ಕಟ್, ರಿಯಾದ್, ಶಾರ್ಜಾ, ಸಿಂಗಪುರ್ ಮತ್ತು ಕುವೈತ್ ಸೇರಿದಂತೆ ಭಾರತದ ಹೊರಗಿನ 12 ನಗರಗಳು ಸೇರಿದಂತೆ ಒಟ್ಟು 334 ನಗರಗಳಲ್ಲಿನ ಒಟ್ಟು 7.09 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದರು.

ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಲ್ಹಾಪುರ, ಪಾಲ್ಘರ್, ರತ್ನಗಿರಿ, ರಾಯಗಡ, ಸಾಂಗ್ಲಿ ಮತ್ತು ಮಹಾರಾಷ್ಟ್ರದ ಸತಾರದಲ್ಲಿ 1,899 ಅಭ್ಯರ್ಥಿಗಳ ಪರೀಕ್ಷೆಯನ್ನು ಜುಲೈ 25 ಮತ್ತು 2ರಂದು ಹಾಜರಾಗಲು ಸಾಧ್ಯವಾಗಲಿಲ್ಲ. ಅವರಿಗೆ ಆಗಸ್ಟ್ 3 ಮತ್ತು 4ರಂದು ನಡೆಸಲಾಯಿತು ಎಂದು ಎನ್​ಟಿಎ ಹೇಳಿದೆ.

ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: Video- ಹಣ ಕದಿಯಲು ಬಂದು ಎಟಿಎಂ ಹಿಂದೆ ಅವಿತುಕೊಂಡ ಖದೀಮ.. ಮುಂದಾಗಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.