ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ 2022ರ ಫಲಿತಾಂಶಗಳನ್ನು ಇಂದು (ಭಾನುವಾರ) ಬೆಳಗ್ಗೆ 10 ಗಂಟೆಗೆ ಪ್ರಕಟಿಸಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ಅಭ್ಯರ್ಥಿಗಳು ಈಗ ಅಧಿಕೃತ ವೆಬ್‌ಸೈಟ್ https://result.jeeadv.ac.in ನಿಂದ ಅವರ ಸ್ಕೋರ್ ಪರಿಶೀಲಿಸಬಹುದು ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡಬಹುದು.
ಜೆಇಇ ಅಡ್ವಾನ್ಸ್ಡ್ ಫಲಿತಾಂಶ ವೀಕ್ಷಿಸುವುದು ಹೇಗೆ?: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲಿ ಜೆಇಇ ಅಡ್ವಾನ್ಸ್ಡ್ 2022ರ ಮೆರಿಟ್ ಪಟ್ಟಿಯನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶವನ್ನು ಪಡೆಯಲು ಅಭ್ಯರ್ಥಿಗಳು ನೋಂದಣಿ ಸಂಖ್ಯೆಗಳು ಮತ್ತು ಜನ್ಮ ದಿನಾಂಕಗಳು ಸೇರಿದಂತೆ ರುಜುವಾತುಗಳೊಂದಿಗೆ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಜೆಇಇ ಅಡ್ವಾನ್ಸ್ಡ್ 2022 ಅನ್ನು ಆ.28 ರಂದು ನಡೆಸಲಾಗಿತ್ತು. 1.56 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
- ಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೀಡಿ.
- ಹೋಂ ಪೇಜ್ನಲ್ಲಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಸೇರಿದಂತೆ ಲಾಗಿನ್ ರುಜುವಾತುಗಳನ್ನು ನಮೂದಿಸಿ.
- ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು.
- ಜೆಇಇ ಅಡ್ವಾನ್ಸ್ಡ್ 2022 ಸ್ಕೋರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ(ಭವಿಷ್ಯದ ಬಳಕೆಗಾಗಿ) ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅಡ್ವಾನ್ಸ್‌ಡ್ ಫಲಿತಾಂಶದ ನಂತರ ಏನು?:
- ಜೆಇಇ ಅಡ್ವಾನ್ಸ್ಡ್ 2022ರ ರ್‍ಯಾಂಕ್‌ಗಳು 2022-23ರ ಶೈಕ್ಷಣಿಕ ವರ್ಷಕ್ಕೆ ಐಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಮಾನ್ಯವಾಗಿರುತ್ತವೆ.
- ಜೆಇಇ ಅಡ್ವಾನ್ಸ್ಡ್ 2022ಗೆ ಅರ್ಹತೆ ಪಡೆಯುವ ವಿದ್ಯಾರ್ಥಿಗಳು ಜಂಟಿ ಸೀಟ್ ಹಂಚಿಕೆ (JoSAA 2022) ಕೌನ್ಸೆಲಿಂಗ್ ಮೂಲಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (IITs) ಪ್ರವೇಶ ಪಡೆಯುತ್ತಾರೆ.
- ಜಂಟಿ ಸೀಟ್ ಹಂಚಿಕೆ (JoSAA 2022) ಕೌನ್ಸೆಲಿಂಗ್ ಪ್ರಕ್ರಿಯೆಯು ಸೆಪ್ಟೆಂಬರ್ 12 ರಂದು ಪ್ರಾರಂಭವಾಗುತ್ತದೆ.
- JoSAA ಕೌನ್ಸೆಲಿಂಗ್ ಅನ್ನು ಒಟ್ಟು ಆರು ಸುತ್ತುಗಳಲ್ಲಿ ನಡೆಸಲಾಗುವುದು.
ಇದನ್ನೂ ಓದಿ: JEE ಅಡ್ವಾನ್ಸ್ಡ್ 2022 ಪರೀಕ್ಷೆ ಬರೆಯುತ್ತಿದ್ದೀರಾ?: ನಿಮ್ಮ ಪರೀಕ್ಷಾ ತಯಾರಿ ಹೀಗಿರಲಿ!