ETV Bharat / bharat

ಜಯಲಲಿತಾ ಸಾವಿನ ವಿಚಾರ.. ಶಶಿಕಲಾ ವಿರುದ್ಧ ತನಿಖೆಗೆ ಆಯೋಗದ ಶಿಫಾರಸು.. ಒಪಿಎಸ್​​​ ಬಣಕ್ಕೆ ಹಿನ್ನಡೆ - ಶಶಿಕಲಾ ಮತ್ತು ಅವರ ಸೋದರಳಿಯ ಟಿಟಿವಿ ದಿನಕರನ್

ಪನ್ವೀರಸೆಲ್ವಂ ಬಣಕ್ಕೆ ಹಿನ್ನಡೆ... ಶಶಿಕಲಾ ಮತ್ತು ಅವರ ಸೋದರಳಿಯ ಟಿಟಿವಿ ದಿನಕರನ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮತ್ತು ಪಕ್ಷ ಹಿಡಿತಕ್ಕೆ ಪಡೆದುಕೊಳ್ಳಲು ಎಐಎಡಿಎಂಕೆ ಸಂಯೋಜಕ ಓ.ಪನ್ನೀರಸೆಲ್ವಂ ಅವರ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಮತ್ತು ದಿನಕರನ್ ಅವರೊಂದಿಗೆ ಭವಿಷ್ಯದ ಮೈತ್ರಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು.

Jayas death recommend inquiry against Sasikala
ಶಶಿಕಲಾ ವಿರುದ್ಧ ತನಿಖೆಗೆ ಆಯೋಗದ ಶಿಫಾರಸು
author img

By

Published : Aug 30, 2022, 1:36 PM IST

ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಆಯೋಗವು ಜಯಾ ಅವರ ಮಾಜಿ ಸಹಾಯಕಿ ವಿ.ಕೆ. ಶಶಿಕಲಾ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಿವೃತ್ತ ನ್ಯಾ ಆರುಮುಗಸಾಮಿ ಆಯೋಗದ ವರದಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಗಿದ್ದು, ವರದಿ ಕುರಿತು ಕಾನೂನು ಅಭಿಪ್ರಾಯ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗಮನಾರ್ಹ ಅಂಶ ಎಂದರೆ, 2021 ರ ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಟಾಲಿನ್, ಡಿಎಂಕೆ ಅಧಿಕಾರಕ್ಕೆ ಬಂದರೆ ಜಯಲಲಿತಾ ಸಾವಿನ ಬಗ್ಗೆ ಹಾಗೂ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದ್ದರು.

ಪನ್ನೀರಸೆಲ್ವಂ ಬಣಕ್ಕೆ ಹಿನ್ನಡೆ: ಶಶಿಕಲಾ ಮತ್ತು ಅವರ ಸೋದರಳಿಯ ಟಿಟಿವಿ ದಿನಕರನ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮತ್ತು ಪಕ್ಷ ಹಿಡಿತಕ್ಕೆ ಪಡೆದುಕೊಳ್ಳಲು ಎಐಎಡಿಎಂಕೆ ಸಂಯೋಜಕ ಓ ಪನ್ನೀರಸೆಲ್ವಂ ಅವರ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಮತ್ತು ದಿನಕರನ್ ಅವರೊಂದಿಗೆ ಭವಿಷ್ಯದ ಮೈತ್ರಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು. ಈ ಮೂಲಕ ಪ್ರಬಲ ತೇವರ್ ಸಮುದಾಯದ ಬೆಂಬಲ ಪಡೆಯುವ ಸಾಹಸ ಮಾಡಿದ್ದರು ಎಂದು OPS ಪರ ನಾಯಕರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಬಹುತೇಕ ತೇವರ್ ಸಂಘಟನೆಗಳು ಪನ್ನೀರಸೆಲ್ವಂ ಅವರನ್ನು ಬೆಂಬಲಿಸಿದ್ದು, ಶಶಿಕಲಾ ಮತ್ತು ದಿನಕರನ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯತೆ ಬಗ್ಗೆ ಪ್ರತಿಪಾದಿಸಿದ್ದವು. ತೇವರ್​​ ಸಮುದಾಯವು ದಕ್ಷಿಣ ತಮಿಳುನಾಡಿನಲ್ಲಿ ಎಐಎಡಿಎಂಕೆಯ ಪ್ರಬಲ ನೆಲೆಯಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಆರುಮುಗಸ್ವಾಮಿ ಆಯೋಗದ ವರದಿ ಸದನದಲ್ಲಿ ಮಂಡನೆಯಾಗುತ್ತಿದ್ದಂತೆ ಶಶಿಕಲಾ ಜೊತೆ ಮೈತ್ರಿ ಮಾಡಿಕೊಳ್ಳುವ ಒಪಿಎಸ್ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷದ ಮೇಲೆ ಹಿಡಿತ ಸಾಧಿಸಿದೆ. ಪಕ್ಷದ ಬಹುಪಾಲು ಜನರಲ್ ಕೌನ್ಸಿಲ್ ಸದಸ್ಯರ ಬೆಂಬಲವನ್ನು ಹೊಂದಿರುವ ಪಳನಿಸ್ವಾಮಿ ಈಗ ಪಕ್ಷದಲ್ಲಿ ಪ್ರಬಲರಾಗಿದ್ದಾರೆ.

ಇದನ್ನು ಓದಿ:ಜಯಲಲಿತಾ ಸಾವಿನ ತನಿಖೆ.. 590 ಪುಟಗಳ ವರದಿ ತಮಿಳುನಾಡು ಸರ್ಕಾರಕ್ಕೆ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.